ಬಳ್ಳಾರಿ: ಅ. 27ರವರೆಗೆ ನಡೆಯಲಿರುವ ನಾಡಹಬ್ಬ ದಸರಾ ಆಚರಣೆಯನ್ನು ಸರ್ಕಾರವು ಹೊರಡಿಸಲಾದ ಮಾರ್ಗಸೂಚಿ ಅನುಸಾರವೇ ಆಚರಿಸಬೇಕು ಮತ್ತು ಮಾರ್ಗಸೂಚಿಯಲ್ಲಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಧಿಕಾರಿ ಎಸ್.ಎಸ್.ನಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಹಾಗೂ ಮಾರ್ಗಸೂಚಿಗಳಂತೆ ಜಿಲ್ಲೆಯಲ್ಲಿ ನಾಡಹಬ್ಬ ದಸರಾ ಆಚರಣೆ ಸಂಬಂಧವಾಗಿ ಕೇಂದ್ರ ಸರ್ಕಾರ ಹೊರಡಿಸಿದ ತೆರವು-5ರ ಅವಧಿಯಲ್ಲಿ ಅನುಮತಿಸಲಾದ ಕಾರ್ಯಚಟುವಟಿಗಳಲ್ಲಿ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ 15ನೇ ಅಕ್ಟೋಬರ್ 2020 ನಂತರ ಈಗಾಗಲೇ 100 ಜನರಿಗೆ ಅನುಮತಿಸಲಾದ ಪರಿಮಿತಿಯನ್ನು ಮೀರಿ ಸೇರುವಂತಹ ಸಾಮಾಜಿಕ/ ಶೈಕ್ಷಣಿಕ/ಕ್ರಿಡೆ/ಮನೋರಂಜನೆ/ಸಾಂಸ್ಕೃತಿಕ/ ಧಾರ್ಮಿಕ/ರಾಜಕೀಯ ಕಾರ್ಯಕ್ರಮಗಳು ಮತ್ತು ಇತರೆ ಸಮಾರಂಭಗಳಿಗೆ ಮುಖಗವಸು, ಕೈತೊಳೆಯುವಿಕೆ ಅಥವಾ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಅನುಮತಿಸಲು ಅವಕಾಶ ಕಲ್ಪಿಸಿದೆ ಎಂದು ಅವರು ವಿವರಿಸಿದ್ದಾರೆ.
ನಾಡಹಬ್ಬವಾದ ದಸರಾವನ್ನು 9 ದಿನಗಳ ಕಾಲ ಅಂದರೆ ಅ. 26ರವರೆಗೆ ಆಚರಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವುದರಿಂದ ದಸರಾ ಹಬ್ಬವನ್ನು ಸರಳ ರೀತಿಯಲ್ಲಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕಾಗುತ್ತದೆ ಎಂದ ಅವರು, ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನರು ಒಮ್ಮೆಲೇ ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಹಂತ ಹಂತವಾಗಿ ಒಂದು ಪಲ್ಲಕ್ಕಿಗೂ ಮತ್ತೂಂದುಪಲ್ಲಕ್ಕಿ ಉತ್ಸವಕ್ಕೆ ಕನಿಷ್ಟ ಅಂತರ ಕಾಪಾಡಿಕೊಳ್ಳತಕ್ಕದ್ದು, ನಿಯಮಿತ ಅವಧಿಯಲ್ಲಿಯೇ ಮುಕ್ತಾಯಗೊಳಿಸಬೇಕು ಎಂದವರು ತಿಳಿಸಿದ್ದಾರೆ.
ನಾಡಹಬ್ಬ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ನಡೆಸಲಾಗುವ ಕಾರ್ಯಕ್ರಮಗಳು ನಿಷೇಧಿಸಲಾಗಿದೆ. ದೇವಸ್ಥಾನಕ್ಕೆ ಬರುವಂತಹ ಭಕ್ತಾಧಿಗಳಿಗೆ ಕಡ್ಡಾಯ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಮತ್ತು ಎರಡು ಹಸ್ತಗಳಿಗೆ ಸ್ಯಾನಿಟೈಜೇಶನ್ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ದಸರಾ ಹಬ್ಬವನ್ನು ಅದೇ ರೀತಿಯಿಂದಲೇಆಚರಿಸುವ ಮೂಲಕ ಸಾಮಾಜದಲ್ಲಿಕಾನೂನು ಸುವ್ಯವಸ್ಥಗೆ ಭಂಗ ಬಾರದಂತೆಕಾಪಾಡುವುದು. ಈ ಮಾರ್ಗಸೂಚಿಗಳುನವರಾತ್ರಿ ಹಾಗೂ ದುರ್ಗಾಪೂಜೆಆಚರಣೆಗೂ ಅನ್ವಯವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ2005 ಹಾಗೂ ಭಾರತೀಯ ದಂಡ ಸಂಹಿತೆಸೆಕ್ಷನ್ 188 ರಡಿಯಲ್ಲಿ ಶಿಸ್ತು/ಕಾನೂನಿನ ಕ್ರಮ ಮತ್ತು ಅನ್ವಯವಾಗಬಹುದಾದಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ