Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಎರಡು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕೋಟಾದಡಿ ಸೀಟು ಪಡೆದವರಿಗೆ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಮುನಿರತ್ನ ಮೇಲೆ ಪ್ರಕರಣ ಆದ ಮೇಲೆ ಅವರನ್ನು ಬಂಧಿಸಲಾಗಿದೆ. ಆದರೆ, ಕಾಂಗ್ರೆಸ್ ಶಾಸಕ ಚನ್ನಾರಡ್ಡಿ ವಿರುದ್ಧ ಸೂಕ್ತ ಸಾಕ್ಷಿಗಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈಗೇನಾದರೂ ನಾನು ಹೇಳಿದರೆ ಅದು ಅವರ ತನಿಖೆಗೆ ವ್ಯತಿರಿಕ್ತವಾಗುತ್ತದೆ ಎಂದರು.
ರಾಯಚೂರು:ನಾಗಮಂಗಲ ಘಟನೆ ಎನ್‌ಐಗೆ ವಹಿಸುವ ಅಗತ್ಯವೇ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಗಮಂಗಲ ಘಟನೆಯಲ್ಲಿ ಪೆಟ್ರೋಲ್ ಬಾಂಬ್ ಬಳಸಿದ್ದಕ್ಕೆ, ಪ್ಯಾಲೆಸ್ತೇನ್ ಧ್ವಜ ಪ್ರದರ್ಶಿಸಿದ್ದಕ್ಕೆ ಗುಪ್ತಚರ ಇಲಾಖೆ ವಿಫಲವಾಗಿದೆ ಎನ್ನಲಾಗದು. ಘಟನೆ ಹಿಂದಿರುವವರನ್ನು ಬಂಧಿಸಲಾಗಿದೆ.
Related Articles
Advertisement