Advertisement

Kasaragod ತ್ಯಾಜ್ಯ ವಿಲೇವಾರಿ ವಿಫಲವಾದರೆ ಕ್ರಮ: ಸಚಿವ ರಾಜೇಶ್‌

12:51 AM Sep 04, 2024 | Team Udayavani |

ಕಾಸರಗೋಡು: ಕೇರಳದಲ್ಲಿ ತ್ಯಾಜ್ಯ ವಿಲೇವಾರಿ ಬದಲಾವಣೆಗೆ ಅನುಗುಣವಾಗಿ ಕಾಸರಗೋಡಿನಲ್ಲಿ ಯಾವುದೇ ಬದಲಾವಣೆ ಆಗದಿರುವುದು ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ತ್ಯಾಜ್ಯ ನಿರ್ವಹಣೆಯಲ್ಲಿನ ವೈಫಲ್ಯ ನಿರಾಶಾದಾಯಕವಾಗಿದೆ ಎಂದು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ.ರಾಜೇಶ್‌ ಹೇಳಿದರು.

Advertisement

ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅಧಿ ಕಾರ ನೀಡಲು ಕಾನೂನಿಗೆ ತಿದ್ದುಪಡಿ ತರಲಾಗಿದ್ದು, ತ್ಯಾಜ್ಯ ಸುರಿಯು ವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಜನ ಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಜಾರಿ ದಳ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸಚಿವರು ಹೇಳಿದರು.

ರಾಜ್ಯ ಸಚಿವ ಸಂಪುಟದ 3ನೇ ವರ್ಷಾಚರಣೆಯ 100 ದಿನಗಳ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ಎಂ.ಬಿ. ರಾಜೇಶ್‌ ಉದ್ಘಾಟಿಸಿದರು. ಶಾಸಕ ಎನ್‌.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಇ.ಚಂದ್ರಶೇಖರನ್‌ ಮತ್ತು ಎ.ಕೆ.ಎಂ.ಅಶ್ರಫ್‌, ನ್ಯಾಯವಾದಿ ಸಿ.ಎಚ್‌.ಕುಂಞಂಬು, ಎಂ.ರಾಜಗೋಪಾಲನ್‌, ಜಿಲ್ಲಾಧಿಕಾರಿ ಕೆ. ಇನºಶೇಖರ್‌ ಮುಂತಾದವರು ಉಪಸ್ಥಿತರಿದ್ದರು. ಜಿ. ಪಂ.ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್‌ ಸ್ವಾಗತಿಸಿದರು. ಜೇಸನ್‌ ಮ್ಯಾಥ್ಯೂ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next