Advertisement

ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡಿದರೆ ಕ್ರಮ

05:02 PM Jul 26, 2022 | Team Udayavani |

ಬೀದರ: ಆಫ್ರಿಕನ್‌ ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದರೂ ಜಿಲ್ಲೆಯಲ್ಲಿ ಕೆಲವರು ಕ್ಯಾಟ್‌ ಫಿಶ್‌ ಸಾಕುತ್ತಿರುವ ದೂರುಗಳು ಕಂಡುಬಂದಿದ್ದು, ಅಂಥವರ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನೀರಾವರಿ ನಿಗಮ, ಮೀನುಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕಾರಂಜಾ ಜಲಾಶಯದ ಮರಕಲ್‌ ಮತ್ತು ರಂಜೋಳಖೇಣಿ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹತ್ತು ಟ್ಯಾಂಬ್‌ಗಳನ್ನು ನಿರ್ಮಿಸಿ ಆಫೀಕನ್‌ ಕ್ಯಾಟ್‌ ಫಿಶ್‌ ಸಾಕಾಣಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕಾರಂಜಾ ಜಲಾಶಯದ ಹಿನ್ನೀರನ್ನು ಬಳಸಿಕೊಂಡು ಸರ್ಕಾರಿ ಜಮೀನು ಅಥವಾ ಖಾಸಗಿ ಪಟ್ಟಾ ಜಮೀನುಗಳಲ್ಲಿ ಟ್ಯಾಂಬ್‌ಗಳನ್ನು ನಿರ್ಮಿಸಿದ್ದು, ಅಧಿಕಾರಿಗಳ ತಂಡ ಸಂಬಂಧಪಟ್ಟ ಜಮೀನಿನ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸದರಿ ಟ್ಯಾಂಬ್‌ಗಳಲ್ಲಿರುವ ಕ್ಯಾಟ್‌ಫಿಶ್‌ ಗಳನ್ನು ಹಿಡಿದು ನಿಷ್ಕ್ರೀಯಗೊಳಿಸಬೇಕು ಹೇಳಿದರು.

ಟ್ಯಾಂಬ್‌ಗಳ ಹತ್ತಿರ ವಾಸಿಸುತ್ತಿರುವ ಕಾರ್ಮಿಕರನ್ನು ಸಂಪರ್ಕಿಸಿ ವರದಿ ಪಡೆದು ಪ್ರಕರಣ ದಾಖಲಿಸಲು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಶಿಲ್ಪಾ ಎಂ., ಸಹಾಯಕ ಆಯುಕ್ತ ಮಹಮ್ಮದ ನಯೀಮ್‌ ಮೋಮಿನ್‌, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ನೀರಾವರಿ ನಿಗಮದ ಇಇ ಸ್ವಾಮಿ, ಸಣ್ಣ ನೀರಾವರಿ ಇಲಾಖೆ ಇಇ ಸುರೇಶ ಮೇದಾ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲೇಶ ಬಡಿಗೇರ, ಡಿವೈಎಸ್‌ಪಿ ಸತೀಶ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next