ಚುನಾವಣೆಯಂತೆ ಗಂಭೀರವಾಗಿ ಪರಿಗಣಿಸಿ. ನೀತಿ ಸಂಹಿತೆ ಉಲ್ಲಂಘಿಸಿದರೆ ಆಯೋಗದ ನಿರ್ದೇಶನದಂತೆ ಗಂಭೀರ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಸೂಚಿಸಿದರು.
Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತದೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿ ತಹಶೀಲ್ದಾರರು, ಮುದ್ರಕರು, ಕೇಬಲ್ ಟಿ.ವಿ ಪ್ರಸಾರಕರು ಹಾಗೂ ವಾಣಿಜ್ಯೋದ್ಯಮಿಗಳೊಂದಿಗೆ ಅವರು ಮಾತನಾಡಿದರು.
Related Articles
Advertisement
ಕರಪತ್ರ, ಫ್ಲೆಕ್ಸ್, ಬ್ಯಾನರ್ ಒಳಗೊಂಡಂತೆ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಿಸುವ ಮುನ್ನ ಮುದ್ರಿಸುವ ವ್ಯಕ್ತಿಯಿಂದ ವಿವರ ಪಡೆಯಬೇಕು. ಮುದ್ರಿಸಿದ ಕರಪತ್ರದ ಮೇಲೆ ಕಡ್ಡಾಯವಾಗಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಹೀಗೆ ಮುದ್ರಿಸಿದ ಕರಪತ್ರ ಫ್ಲೆಕ್ಸ್ ಬ್ಯಾನರ್‌ಗಳ ನಾಲ್ಕು ಪ್ರತಿಗಳ ಸಹಿತ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಇದನ್ನೂ ಓದಿ :ಮಾಸ್ಕ್ ಧರಿಸದ ಮಹಿಳೆಗೆ ದಂಡ! ಆಕ್ಷೇಪಿಸಿದ ಕಾರ್ಪೊರೇಟರ್ ಕಾಲು ಮುರಿದ ಪೊಲೀಸರು
ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳ ಪ್ರದರ್ಶನ ಮಾಡುವಂತಿಲ್ಲ. ಈಗಾಗಲೇ ವಿವಿಧ ಯೋಜನೆ ನಾಮಫಲಕಗಳಲ್ಲಿ ಸಚಿವರು, ಶಾಸಕರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳ ಭಾವಚಿತ್ರಗಳು ಇದ್ದರೆ ಮರೆಮಾಚಿಸಬೇಕು ಎಂದರು.
ಯಾವುದೇ ಹೊಸ ಕಾಮಗಾರಿ ಆರಂಭಿಸುವಂತಿಲ್ಲ, ಹೊಸ ಯೋಜನೆ ಘೋಷಿಸುವಂತಿಲ್ಲ, ಈಗಾಗಲೇ ಕಾಮಗಾರಿಗಳು ಆರಂಭಗೊಂಡಿದ್ದರೆ ಮುಂದುವರಿಸಬಹುದು, ಕೆಡಿಪಿ, ಜಿಪಂ ಸಭೆ ನಡೆಸಬಹುದು. ಆದರೆ ಹೊಸ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದರು.
ಇದನ್ನೂ ಓದಿ :ನೋಂದಣಿ ರಹಿತ ಕ್ರಿಮಿನಾಶಕ ಮಾರಾಟ: ಕೃಷಿ ಜಾಗೃತ ದಳದ ಅಧಿಕಾರಿಗಳಿಂದ 3 ಅಂಗಡಿ ಸೀಝ್
ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಮಾತನಾಡಿ, ಅನಧಿಕೃತ ಹಣಕಾಸಿನ ವಹಿವಾಟು ಹಾಗೂ ಸಾಗಾಣಿಕೆ ಮೇಲೆ ನೀಗಾ ವಹಿಸಬೇಕು. ಆಯೋಗದ ಮಾರ್ಗಸೂಚಿಯಂತೆ 50 ಸಾವಿರಕ್ಕಿಂತ ಹೆಚ್ಚು ಹಣ ಕೊಂಡೊಯ್ದರೆ ಸೂಕ್ತ ದಾಖಲೆ ಹೊಂದಿರಬೇಕು. ವಿವಿಧ ವಾಣಿಜ್ಯ-ವಹಿವಾಟು ನಡೆಸುವ ವರ್ತಕರು ದೈನಂದಿನ ವ್ಯವಹಾರದ ಹಣ ಜಮಾವಣೆ ಕುರಿತಂತೆ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು.
ಕುಕ್ಕರ್, ಐರನ್ ಬಾಕ್ಸ್, ಸೀರೆ, ಬೆಳ್ಳಿ, ಚಿನ್ನದ ಸಾಮಗ್ರಿ ಸಗಟಾಗಿ ಖರೀದಿ, ಮಾರಾಟ ಹಾಗೂ ದಾಸ್ತಾನು ವಹಿವಾಟಿನ ಮೇಲೆ ನಿಗಾವಹಿಸಿ ಚುನಾವಣಾ ಕಾರಣಗಳಿಗಾಗಿ ವಹಿವಾಟು ನಡೆದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ :ಕಾಂಗ್ರೇಸ್ ಸಂಸದ ಡಿ.ಕೆ. ಸುರೇಶ್ ಗೂ ಕೋವಿಡ್ ಸೋಂಕು ದೃಢ!
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ಪ್ರಶಾಂತ ನಾಲವಾರ್, ಹಾವೇರಿ ತಹಶೀಲ್ದಾರ್ ಜಿ.ಎಸ್. ಶಂಕರ, ವಾರ್ತಾಧಿಕಾರಿ ಬಿ.ಆರ್. ರಂಗನಾಥ, ವಿಡಿಯೋ ಸಂವಾದದ ಮೂಲಕ ವಿವಿಧ ತಾಲೂಕ ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು, ತಾಪಂ ಕಾರ್ಯನಿರ್ವಹಣಾಧಿ ಕಾರಿಗಳು, ಮುದ್ರಣ ಸಂಸ್ಥೆ ಮಾಲೀಕರು, ಕೇಬಲ್ ಟಿ.ವಿ ಮಾಲೀಕರು ಹಾಗೂ ವಾಣಿಜ್ಯೋದ್ಯಮಿಗಳು ಇದ್ದರು.