Advertisement

ವಚನ ಅಧ್ಯಯನ ಪೀಠಕ್ಕೆ ಕ್ರಮ

06:53 AM Mar 22, 2019 | Team Udayavani |

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಕುಲಪತಿ ಡಾ| ಸ.ಚಿ. ರಮೇಶ್‌ ಹೇಳಿದರು.

Advertisement

ನಗರದ ವಿಜಯನಗರ ಕಾಲೇಜಿನಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ಡಾ|ಬಸವರಾಜ ಮಲಶೆಟ್ಟಿ ದತ್ತಿ ಉಪನ್ಯಾಸ ಹಾಗೂ ಡಾ| ಬಸವರಾಜ ಮಲಶೆಟ್ಟಿ ವಿರಚಿತ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ನಾಟಕಗಳು: ವಿಶ್ಲೇಷಣೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಡೂರಿನ ಪ್ರಭುದೇವ ಸಂಸ್ಥಾನ ಮಠ ವಿಶ್ವವಿದ್ಯಾಲಯದ ರೀತಿಯಲ್ಲಿ ಮಾಡುತ್ತಿದೆ. ಶ್ರೀಗಳು ಹೇಳಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸುವುದು ಔಚಿತ್ಯಪೂರ್ಣ ಎನ್ನಿಸಿದೆ. ಶ್ರೀಗಳ ಆಶಯದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರ ವಸೆ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹಗಳನ್ನು ಮಾಡಿಸಿ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ  ಉಂಟು ಮಾಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಜಾತಿಯನ್ನು ಪ್ರತಿಷ್ಠೆಯ ಹಿನ್ನೆ ಲೆಯಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಸಂಡೂರಿನ ಪ್ರಭುದೇವ ಸಂಸ್ಥಾನ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನಪೀಠ ಸ್ಥಾಪನೆ ಮಾಡಿದರೆ, ತಳ ಸಮುದಾಯಗಳ ವಚನಗಳ ಅಧ್ಯಯನ ಹಾಗೂ ತಳಮುದಾಯದವರ ವಚನಕಾರರ ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸಲು ಅನುಕೂಲವಾಗಲಿದೆ ಎಂದರು.

Advertisement

ಡಾ| ಬಸವರಾಜ ಮಲಶೆಟ್ಟಿ ಅವರು ರಂಗಭೂಮಿ, ಬಯಲಾಟ ಕಲೆಯನ್ನು ಆಳವಾಗಿ ಅಧ್ಯಯನ ಮಾಡಿ ಬಯಲಾಟ ಕಲೆಯನ್ನು ಉಳಿಸಿ-ಬೆಳೆಸಲು ಸಾಕಷ್ಟು ಶ್ರಮಿಸಿದ್ದರು. ಬಯಲಾಟಗಳನ್ನು ಪರಿಷ್ಕರಣೆ ಮಾಡಿ ಹೊಸ ರೂಪ ನೀಡಿ ನಾಡಿನಾದ್ಯಂತ ಪ್ರಚಾರ ಮಾಡಿದ್ದರು. ಮಲಶೆಟ್ಟಿ ಕೇವಲ ಪಾಠಕ್ಕೆಷ್ಟೇ ಸೀಮಿತವಾಗದೆ ಅನೇಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅತ್ಯಂತ
ಕ್ರಿಯಾಶೀಲರಾಗಿದ್ದರು ಎಂದು ಶ್ರೀಗಳು ಸ್ಮರಿಸಿದರು. ವಿಜಯನರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜಯನಗರ ಕಾಲೇಜಿನ ಪ್ರಾಚಾರ್ಯ ಡಾ| ವಿ.ಎಸ್‌. ಪ್ರಭಯ್ಯ ಅಧ್ಯಕ್ಷತೆ ವಹಿಸಿದ್ದರು.

ವಿಜಯನಗರ ಕಾಲೇಜಿನ ಕರ್ನಾಟಕ ಸಂಘ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ| ಮೃತ್ಯುಂಜಯ ರುಮಾಲೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಲಕ್ಷ್ಮಣ ಕರಿಭೀಮಣ್ಣವನವ ರ್‌ ಮಾತನಾಡಿದರು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ| ಟಿ. ಎಚ್‌. ಬಸವರಾಜ, ಕಾರ್ಯದರ್ಶಿ ಡಾ| ನಂದೀಶ್ವರ ದಂಡೆ, ಬಸವ ಬಳಗದ ಬಸವರಾಜ ಮಾವಿನಹಳ್ಳಿ, ಶಾರದಾ ಮಲಶೆಟ್ಟಿ ಇದ್ದರು.

ರಂಗಭೂಮಿ, ಬಯಲಾಟಗಳ ಮೇಲೆ ಬಸವರಾಜ ಮಲಶೆಟ್ಟಿ ಅವರು ಪ್ರಾಣವನ್ನೇ ಇಟ್ಟುಕೊಂಡಿದ್ದರು. ಜನಪದ, ನಾಟಕ, ಬಯಲಾಟ, ರಂಗಭೂಮಿ ಸೇರಿದಂತೆ ಒಂದೊಂದು ಕಲಾ ಪ್ರಕಾರಗಳ ಕುರಿತು ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸಬೇಕು. ಕೇವಲ ಬಳ್ಳಾರಿ ಜಿಲ್ಲೆಗೆ ಮ ಲಶೆಟ್ಟಿ ಅವರನ್ನು ಸೀಮಿತಗೊಳಿಸಿದೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.
  ಡಾ| ಕೆ. ರವೀಂದ್ರನಾಥ, ಪ್ರಾಧ್ಯಾಪಕ ಕನ್ನಡ ವಿವಿಯ ಹಸ್ತಪ್ರತಿ ವಿಭಾಗ ಹಂಪಿ

Advertisement

Udayavani is now on Telegram. Click here to join our channel and stay updated with the latest news.

Next