Advertisement
50 ಲಕ್ಷ ರೂ.ವೆಚ್ಚದಲ್ಲಿ ಕೃಷ್ಣಾಪುರದಲ್ಲಿ 2ನೇ ಹಂತದ ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಾಟಿಪಳ್ಳ, ಕೃಷ್ಣಾಪುರ, ಕೂಳೂರು, ಕಾವೂರು ಸಹಿತ ವಿವಿಧೆಡೆ ಮಾರುಕಟ್ಟೆ ಸಂಕೀರ್ಣಗಳು ತಲೆ ಎತ್ತಲಿವೆ. ಈಗಾಗಲೇ ಕಾವೂರು, ಕೃಷ್ಣಾಪುರದಲ್ಲಿ ಕಾಮಗಾರಿ ಆರಂಭವಾಗಿದೆ ಎಂದರು. ಸ್ಥಳೀಯವಾಗಿ ನಾಗರಿಕರಿಗೆ ಒಂದೇ ಸೂರಿನಡಿ ನಿತ್ಯ ಬಳಕೆಯ ವಸ್ತುಗಳು ಲಭ್ಯವಾಗಬೇಕು ಎಂಬುದು ನಮ್ಮ ಅಶಯ. ಇದರಿಂದ ಕಡಿಮೆ ವೆಚ್ಚ, ಸಮಯದ ಉಳಿತಾಯ, ಗುಣ ಮಟ್ಟದ ಪರಿಕರಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.
ನಾಲ್ಕು ವರ್ಷದ ಅವಧಿಯಲ್ಲಿ ಮಂಗಳೂರು ಉತ್ತರಕ್ಕೆ ವಿವಿಧ ಹಣಕಾಸು ಯೋಜನೆಯಡಿ, ಮುಖ್ಯಮಂತ್ರಿಗಳ ವಿಶೇಷ ವಿವೇಚನೆಯಿಂದ ನೀಡಿದ ಅನುದಾನ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನ ಬಂದಿದೆ.ಇದರಲ್ಲಿ ಮುಖ್ಯವಾಗಿ ಸುರತ್ಕಲ್ ಗಣೇಶ್‌ಪುರ ಚತುಷ್ಪಥ ರಸ್ತೆಗೆ 62 ಕೋ.ರೂ, ಸುರತ್ಕಲ್ ಹೈಟೆಕ್ ಮಾರುಕಟ್ಟೆಗೆ 120 ಕೋ.ರೂ ಸೇರಿದೆ. ನಗರ ಮತ್ತು ಗ್ರಾಮಾಂತರ ಮೂಲ ಸೌಕರ್ಯ ಯೋಜನೆಯಡಿ ರಸ್ತೆ ವಿಸ್ತರಣೆ, ಡಾಮರಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು. ಸ್ಥಳೀಯ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಮಾಜಿ ಮೇಯರ್ ಗುಲ್ಜಾರ್ ಬಾನು, ಪಾಲಿಕೆ ಸುರತ್ಕಲ್ ವಲಯಾ ಯುಕ್ತ ರವಿಶಂಕರ್, ಎಂಜಿನಿಯರ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.