Advertisement
ಬಜಪೆ ಗ್ರಾಮ ಪಂಚಾಯತ್‌ನಿಂದ ಬ್ಯಾನರ್, ಬಂಟಿಂಗ್ಸ್‌ಗಳಿಂದ ಜನರಿಗೆ ತೊಂದರೆ ಯಾಗುವುದರನ್ನು ತಪ್ಪಿಸಲು ಬಸ್ಸು ನಿಲ್ದಾಣದ ಹಿಂದುಗಡೆ ಕಬ್ಬಿಣದ ಕಂಬಗಳನ್ನು ಹಾಕಿ ವ್ಯವಸ್ಥೆಗಳನ್ನು ಮಾಡಿತ್ತು. ಅಲ್ಲಿ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಆದರೆ ಇಂದು ಅದನ್ನು ಕೂಡ ತೆರವುಗೊಳಿಸಲಾಯಿತು. ಚುನಾವಣಾಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿನಿಂದ ಗಮನಿಸುತ್ತಿದೆ.ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿ ಯಾವುದೇ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಜನರು ಜನರೂ ಕೂಡ ಈಗ ಆಲರ್ಟ್ ಆಗಿದ್ದಾರೆ.
ಗ್ರಾಮ ಪಂಚಾಯತ್‌ನಿಂದ ಅನುಮತಿ ಪಡೆದರೂ ಬ್ಯಾನರ್ ಗಳ ತೆರವು ಕಾರ್ಯನಡೆದಿದೆ. ಖಾಸಗಿ ಜಾಗದಲ್ಲೂ ಇರುವ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ. ಬ್ಯಾನರ್,ಬಂಟಿಂಗ್ಸ್‌ನಿಂದ ತುಂಬಿದ್ದ ಬಜಪೆ ಪೇಟೆ ಸ್ವಚ್ಛವಾಗಿ ಕಂಡು ಬಂತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಣ್ಣಪುಟ್ಟ ಪೋಸ್ಟರ್‌ಗಳನ್ನು ಕೂಡ ತೆರವು ಗೊಳಿಸಲಾಗಿದೆ. ಈ ಬ್ಯಾನರ್ ಗಳಿಂದ ಬಜಪೆ ಪೇಟೆಯಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿತ್ತು. ಈಗ ಇದಕ್ಕೂ ಪರಿಹಾರ ಸಿಕ್ಕಿದಂತಾಗಿದೆ.