ಬೆಂಗಳೂರು: ಕೋವಿಡ್ ಪರೀಕ್ಷೆಗಳು ನಿಗದಿತ ಗುರಿ ತಲುಪಲು ಕೊರತೆಯಿರುವ ಸಿಬ್ಬಂದಿಯನ್ನು ಪ್ರಕೃತಿ ವಿಕೋಪ ನಿರ್ವಹಣೆ ಅಧಿನಿಯಮದ ಅಡಿಯಲ್ಲಿ ಆದೇಶ ಹೊರಡಿಸಿ ನೇಮಕ ಮಾಡಿ ಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾ ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೇರ ನೇಮಕದ ಜತೆಗೆ ರಾಜೀವ್ ಗಾಂಧಿ ಆರೋಗ್ಯ ವಿವಿ ಅಂತಿಮ ವರ್ಷದ ಪ್ರಯೋಗಾಲಯ ತಂತ್ರಜ್ಞ ಕೋರ್ಸ್ ವಿದ್ಯಾರ್ಥಿಗಳು, ವಿಜ್ಞಾನ ಪದವೀಧರರು ಮತ್ತು ಸ್ವಯಂ ಸೇವಕರನ್ನು ತರಬೇತಿ ನೀಡಿ ಬಳಸಿಕೊಳ್ಳಲು ತಕ್ಷಣ ಆದೇಶ ಹೊರಡಿಸುವಂತೆ ವಿಡಿಯೋ ಸಂವಾದದಲ್ಲಿ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಕನಿಷ್ಠ 30 ಸಾವಿರ ಪರೀಕ್ಷೆ ಮಾಡುವ ಗುರಿ ನೀಡಲಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದ ಗುರಿ ತಲುಪಲು ಆಗುತ್ತಿಲ್ಲ.
ಈಗಾಗಲೇ ನಗರದಲ್ಲಿರುವ ಎಂಬತ್ತು ಖಾಸಗಿ ಲ್ಯಾಬ್‌ಗಳ ಸಿಬ್ಬಂದಿ, ಪೀವರ್ ಕ್ಲಿನಿಕ್‌ಗಳಲ್ಲಿರುವ ಸಿಬ್ಬಂದಿಗ ಳನ್ನು ಬಳಸಿಕೊಂಡರು ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಮಾದರಿ ಸಂಗ್ರಹಕ್ಕೆ ಸಂಚಾರಿ ವಾಹನಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಅವುಗಳನ್ನು ಬಳಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣವೇ ಸಿಬ್ಬಂದಿ ಕೊರತೆ ನೀಗಿಸಲು ಆದೇಶಿಸಿದರು.
ಮಾಹಿತಿ ಸಂಗ್ರಹಿಸಿ ಹಂಚಿಕೊಳ್ಳಿ: ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿ ಯನ್ನು ವಲಯವಾರು ಅಧಿಕಾರಿ ಮತ್ತು ಸಿಬ್ಬಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ. ಇದಕ್ಕಾಗಿ ಎಲ್ಲ ವಲಯಗಳಲ್ಲೂ ಸ್ಥಳೀಯ ಮಾಹಿತಿಗಳ ಡ್ಯಾಷ್‌ಬೋರ್ಡ್ ಸ್ಥಾಪನೆ ಮಾಡಿ ವಾರ್‌ರೂಮ್‌ಗೆ ಲಭ್ಯವಾಗುವ ಮಾಹಿತಿಗಳನ್ನು ಹಂಚಿಕೆ ಮಾಡಿಕೊಳ್ಳ ಬೇಕು. ಮಾಹಿತಿ ವಿಕೇಂದ್ರಿಕೃತಗೊಳ್ಳದಿದ್ದರೆ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಪೂರಕವಾಗಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕಿಯೋನಿಕ್ಸ್ ಮೂಲಕ ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಜನಪ್ರತಿನಿಧಿಗಳು ಮತ್ತು ಸ್ಥಳೀಯರನ್ನು ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಕೋವಿಡ್ ಸೋಂಕಿತರು, ಕ್ವಾರಂಟೈನ್ ಮತ್ತು ಚಿಕಿತ್ಸೆಗೆ ಸಂಬಂಧಿ ಸಿದಂತೆ ಜನರಲ್ಲಿ ಅರಿವಿನ ಕೊರತೆ ಇದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಜಾಗೃತಿ ಆಂದೋಲನಕ್ಕೆ ಕ್ರಿಯಾ ಯೋಜನೆ ರೂಪಿಸಬೇಕು ಎಂದರು.