Advertisement

ಪಾರಂಪರಿಕ ಸ್ಮಾರಕ ಗುರುತಿಸುವಿಕೆಗೆ ಕ್ರಮ: ಡೀಸಿ

02:03 PM Nov 18, 2020 | Suhan S |

ಚಾಮರಾಜನಗರ: ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳು, ತಾಣಗಳು, ಕಟ್ಟಡ, ಜಲ ತಾಣಗಳನ್ನು ಗುರುತಿಸಿ ಪಟ್ಟಿ ಮಾಡಿ ಅವುಗಳಿಗೆ ಶ್ರೇಣಿ ನೀಡುವ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಾರಂಪರಿಕ ಸಂರಕ್ಷಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಅಧಿಸೂಚನೆ ಅನುಸಾರ ಐತಿಹಾಸಿಕ, ಸಾಂಸ್ಕೃತಿಕ,ಪಾರಂಪರಿಕಕಟ್ಟಡ,ಸ್ಮಾರಕ,ಮಂಟಪಗಳ ವಾಸ್ತು, ವಿನ್ಯಾಸ, ಕಲ್ಯಾಣಿ, ಕೊಳ, ಕೆರೆ, ದೇವಸ್ಥಾನ,ಶಾಲೆ, ಅಣೆಕಟ್ಟು, ಅರಣ್ಯ ಪ್ರದೇಶದೊಳಗಿರುವ ಪರಂಪರೆಯ ಸ್ಥಳಗಳನ್ನು ಮೊದಲು ಗುರುತಿಸಬೇಕು. ನಂತರ ಮುಂದಿನ ಹಂತದಲ್ಲಿ ಅವುಗಳನ್ನು ವರ್ಗೀಕರಿಸಿ ಶ್ರೇಣಿ ನೀಡಿ ಸಂರಕ್ಷಿಸುವ ಕೆಲಸಜಿಲ್ಲೆಯಲ್ಲಿಆಗಬೇಕಿದೆ.ಇದಕ್ಕಾಗಿಯೇಪಾರಂಪಾರಿಕ ಸಂರಕ್ಷಣಾ ಸಮಿತಿ ಸಲಹೆ ನೀಡಿ ಮುಂದಿನ ಕಾರ್ಯಗಳಿಗೆ ಸಹಕರಿಸಬೇಕಿದೆ ಎಂದರು.

ಜಿಲ್ಲೆ ಸಾಂಸ್ಕೃತಿಕ, ಐತಿಹಾಸಿಕವಾಗಿ ಶ್ರೀಮಂತವಾಗಿದ್ದು. ಕಳೆದ 23 ವರ್ಷಗಳ ಹಿಂದೆ ಪ್ರತ್ಯೇಕ ಜಿಲ್ಲೆಯಾಗಿರುವ ಚಾಮರಾಜನಗರ ತನ್ನದೇ ಆದ ಪರಂಪರೆ ಹೊಂದಿದೆ. ಈಗಾಗಲೇ ಐತಿಹಾಸಿಕ ಸ್ಥಳ ಹೊರತುಪಡಿಸಿ ಇನ್ನೂ ಬೆಳಕಿಗೆ ಬರದ ಅನೇಕ ಪಾರಂಪರಿಕ ತಾಣಗಳಿದ್ದು ಅವುಗಳನ್ನು ಗುರುತಿಸುವ ಮಹತ್ತರಕಾರ್ಯ ಆಗಬೇಕೆಂದರು.

ಪರಂಪರೆಯ ಮಹತ್ವದ ಸ್ಥಳಗಳನ್ನು ಇತಿಹಾಸ ತಜ್ಞರು ವಾಸ್ತುಶಿಲ್ಪಿಗಳು, ನೈಸರ್ಗಿಕ ತಜ್ಞರು, ಸ್ಟ್ರಕ್ಚರಲ್‌ ಎಂಜಿನಿಯರ್‌ಗಳು, ಲಲಿತ ಕಲೆ ಕ್ಷೇತ್ರ, ಪರಂಪರೆ ವಿಷಯದಲ್ಲಿ ಅನುಭವ ಪರಿಣತಿ ಹೊಂದಿರುವವರು, ಪ್ರಾಚ್ಯ ವಸ್ತು ಪರಂಪರೆ ಇಲಾಖೆ ಅಧಿಕಾರಿಗಳು ಸೇರಿ ಇತರೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಪಾರಂಪರಿಕ ಸಮಿತಿ ಸ್ಥಳೀಯ ಪರಂಪರೆಯ ಮಹತ್ವ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸೂಕ್ತ ಸಲಹೆ ನೀಡುವ ಮೂಲಕ ನೆರವಾಗಬೇಕು. ಇದಕ್ಕೂಮೊದಲು ಇಂಡಿಯನ್‌ ಹೆರಿಟೇಜ್‌ ಸಿಟೀಸ್‌ ನೆಟ್‌ ವರ್ಕ್‌ ಗುರುತಿಸುವಕಾರ್ಯಆರಂಭಿಸಲುಅವಶ್ಯಕಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾರಂಪರಿಕ ಸಂರಕ್ಷಣಾ ಸಮಿತಿ ಸದಸ್ಯರಾದಸ್ಟ್ರಕ್ಚರಲ್‌ ಎಂಜಿನಿಯರ್‌ ಡಾ. ಶಕೀಬ್‌ ವುರ್‌ ರೆಹಮಾನ್‌, ವಾಸ್ತು ಶಿಲ್ಪಿ ಸುನೀಲ್‌ ನಾಯಕ್‌, ಪರಿಸರ ತಜ್ಞ ಡಾ.ಬಿ.ಮನೋಜ್‌ ಕುಮಾರ್‌, ಲಲಿತಾ ಕಲಾಕ್ಷೇತ್ರದ ಬಗ್ಗೆ ಪರಿಣತಿಯುಳ್ಳ ರಂಗಕರ್ಮಿಕೆ.ವೆಂಕಟರಾಜು, ಪರಂಪರೆ ವಿಷಯ ಪರಿಣಿತಸಿ.ಪಿ.ಹುಚ್ಚೇಗೌಡ, ನಗರದ ಜೆಎಸ್‌ಎಸ್‌ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎನ್‌. ಗಾಯತ್ರಿ ದೇವಿ, ಇತಿಹಾಸ ಸಹಾಯಕ ಪ್ರಾಧ್ಯಾಪಕಕೆ.ಎಸ್‌.ಮರಿಸ್ವಾಮಿ, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ಮಲಾ ಮಠಪತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್‌, ನಗರಸಭೆ ಆಯುಕ್ತ ರಾಜಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪಂಕಜಾ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಜೆ.ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next