ಯಳಂದೂರು: ಮಾಂಬಳ್ಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು ಎಂದು ಅಧ್ಯಕ್ಷೆ ಸಿ.ಇಂದ್ರಮ್ಮ ಮನವಿ ಮಾಡಿದರು.
ಗ್ರಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಈ ಗ್ರಾಮ ದೊಡ್ಡದಾಗಿದ್ದು, ಒಂದು ಗ್ರಾಮಕ್ಕೆ ಒಂದುಪಂಚಾಯ್ತಿ ಇದೆ. ಇದನ್ನು ಗ್ರಾಪಂಗೆಬರುವ ಅನುದಾನ ಬಳಸಿಕೊಂಡುಮಾದರಿ ಮಾಡಲು ಶ್ರಮವಹಿಸುವಂತೆ ಸಲಹೆ ನೀಡಿದರು.
ಪಿಡಿಒ ಎಂ.ರಮೇಶ್ ಮಾತನಾಡಿ, ಆದರ್ಶ ಗ್ರಾಮ ಯೋಜನೆಯಡಿ ಬಾಕಿಉಳಿದಿರುವ ಕಾಮಗಾರಿಗಳನ್ನು ಬೇಗ ಮುಗಿಸಬೇಕು. ಅಲ್ಲದೆ, ಇರುವಅನುದಾನ ಬಳಸಿಕೊಂಡು ಕಾಂಕ್ರೀಟ್‌ರಸ್ತೆ, ಚರಂಡಿ ಕಾಮಗಾರಿಗಳಿಗೆ ಕಾಯಕಲ್ಪಒದಗಿಸಬೇಕಿದೆ, ಎಸ್‌ಇಪಿ, ಟಿಎಸ್‌ಪಿಯೋಜನೆ ಅನುದಾನ ಬಳಸಿಕೊಳ್ಳಬೇಕು,ಶಾಲೆ, ಅಂಗನವಾಡಿ ಅಭಿವೃದ್ಧಿಗೆ ಆದ್ಯತೆನೀಡಲು ಸದಸ್ಯರು ಬೆಂಬಲಿಸಬೇಕು ಎಂದು ಹೇಳಿದರು.
ಈ ವೇಳೆ ಇಲ್ಲಿಂದ ವರ್ಗಾವಣೆಗೊಂಡ ಲೆಕ್ಕ ಸಹಾಯಕ ಶಿವಕುಮಾರ್, ಹೊಸದಾಗಿ ಆಗಮಿಸಿದ ಪಿಡಿಒ ಎಂ.ರಮೇಶ್,ದ್ವಿತೀಯ ದರ್ಜೆ ಸಹಾಯಕ ಬಿ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಆರ್. ವರದರಾಜು,ಸದಸ್ಯರಾದ ಆರ್.ಮಲ್ಲೇಶ್, ಜೆ.ಮುಬಾರಕ್ ಉನ್ನೀಸಾ, ಬಿ.ಸುವರ್ಣಾ, ಆರ್.ಜ್ಯೋತಿ, ಮುತ್ತುರಾಜ್, ಲಕ್ಷ್ಮೀಪತಿ, ಎಂ.ಆರ್. ದರ್ಶನ್‌ಕುಮಾರ್, ಸೌಭಾಗ್ಯಲಕ್ಷ್ಮೀ, ಎಸ್.ರಾಜೇಶ್ವರಿ, ಎಸ್. ದೇವರಾಜು, ಎಲ್.ಲಕ್ಷ್ಮೀ, ಮಹಮ್ಮದ್‌ಮುಜಾಹಿದ್ ಉಲ್ಲಾ, ಮುಖಂಡರಾದ ಮಾಂಬಳ್ಳಿ ರಾಮು ಹಾಜರಿದ್ದರು.