Advertisement

ಕಂದು ರೋಗ ನಿಯಂತ್ರಣಕ್ಕೆ ಕ್ರಮ

06:09 PM Sep 08, 2021 | Team Udayavani |

ಬೀದರ: ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಅತೀ ಅವಶ್ಯಕತೆ ಇದೆ ಎನ್ನುವಂತಹ ವಿಷಯಗಳ ಬಗ್ಗೆ ರೈತರಿಗೆ ತಿಳಿಸಿ, ಅವರ ಮನವೊಲಿಸಿ ಲಸಿಕೆ ಕಡ್ಡಾಯ ಹಾಕಿಸಬೇಕು. ಪಶು ವೈದ್ಯರು ಹಳ್ಳಿಗಳಿಗೆ ಬಂದಾಗ ರೈತರು ಲಸಿಕಾಕರಣಕ್ಕೆ ಸಹಕರಿಸಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮನವಿ ಮಾಡಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ಕಂದುರೋಗ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಪಶುಪಾಲನಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ವಿಭಾಗೀಯ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುವ ಹಾಗೂ ಪ್ರಾಣಿ ಜನ್ಯ ಮಾನವ ರೋಗದ ಬಗ್ಗೆ ಮೊದಲು ಪಶುಪಾಲನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಹಿತಿ ಇರಬೇಕು. ಗಂಡು ಕರುಗಳಿಗೆ ಈ ಲಸಿಕೆ ಹಾಕಿಸಬಾರದು ಎನ್ನುವಂತಹ ವಿಶೇಷ ಮುನ್ನೆಚ್ಚರಿಕೆಯ ಕ್ರಮಗಳ ಪಾಲನೆಗೆ ಒತ್ತು ಕೊಡಬೇಕು ಎಂದರು.

ಬೀದರ ಜಿಲೆಯಲ್ಲಿ ಇರುವ ಎಲ್ಲ ಒಟ್ಟು 25,000 ಹೆಣ್ಣು ಕರುಗಳನ್ನು ಕಡ್ಡಾಯವಾಗಿ ಲಸಿಕೆಗೊಳಪಡಿಸಬೇಕು. ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಲಸಿಕಾದಾರರು  ಕೂಡ ಕಡ್ಡಾಯ ಹ್ಯಾಂಡ್‌ ಗ್ಲೌಸ್‌ ಮತ್ತು ಮಾಸ್ಕ್ ಧರಿಸಿ ಸುರಕ್ಷತೆಯಿಂದ ಲಸಿಕೆ ಹಾಕಬೇಕು ಎಂದು ಸಚಿವರು ಸಲಹೆ ಮಾಡಿದರು.

ಅಪರ ನಿರ್ದೇಶಕ ಡಾ| ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಬಂಧಕೋಪಾಯವಾಗಿ 4-8 ತಿಂಗಳು ಪ್ರಾಯದ ಹಸು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ತಪ್ಪದೇ ಜೀವನದಲ್ಲಿ ಒಮ್ಮೆ ಮಾತ್ರವೇ ಲಸಿಕೆ ಹಾಕಿಸುವುದರಿಂದ ಜಾನುವಾರುಗಳ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬುದನ್ನು ರೈತರು ಅರಿಯಬೇಕು ಎಂದು ತಿಳಿಸಿದರು.

Advertisement

ಕಾರ್ಯಾಗಾರದಲ್ಲಿ ಕಂದು ರೋಗ ಎಂದರೇನು?, ಅದನ್ನು ತಡೆಗಟ್ಟುವ ರೀತಿ ಹೇಗೆ?, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಏನು? ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಸಮಗ್ರ ಚರ್ಚಿಸಲಾಯಿತು. ಕಂದು ರೋಗವು ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆ ಮುಂತಾದ ಪ್ರಾಣಿಗಳಲ್ಲಿ ಕಂಡು ಬರುವ ಮಾರಕ ರೋಗವಾಗಿದೆ. ಈ ರೋಗದಿಂದ ಜಾನುವಾರುಗಳಲ್ಲಿ ಗರ್ಭಪಾತ, ಅನಾರೋಗ್ಯ, ಉತ್ಪಾದನೆಯಲ್ಲಿ ಕುಸಿತ ಹಾಗೂ ಬಂಜೆತನ ಉಂಟಾಗಿ ಪಶುಪಾಲಕರಿಗೆ ನಷ್ಟ ಉಂಟುಮಾಡುತ್ತದೆ ಎಂಬುದನ್ನು ರೈತಬಾಂಧವರಿಗೆ ತಿಳಿಸಿ ಅಭಿಯಾನಕ್ಕೆ ಸಹಕರಿಸಬೇಕು ಎಂಬುದರ ಬಗ್ಗೆ
ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.

ಇಲಾಖೆಯ ಬೀದರ ಉಪ ನಿರ್ದೇಶಕ ಡಾ| ರವಿ ಬೂರೆ ಮಾತನಾಡಿದರು. ಉಪ ನಿರ್ದೇಶಕರಾದ ಕಲಬುರಗಿ ಡಾ| ಬಿ.ಎಸ್‌. ಪಾಟೀಲ, ರಾಯಚೂರಿನ ಡಾ| ಶಿವಣ್ಣ, ಬಳ್ಳಾರಿಯ ಪರಮೇಶ್ವರ ನಾಯ್ಕ ಮತ್ತು ಇನ್ನಿತರರು ಇದ್ದರು.

ಕಂದುರೋಗ ಮುಕ್ತವಾಗಿರುವಹಿಂಡಿನಿಂದಲೇ ಹಸುಗಳನ್ನು ಖರೀದಿಸಬೇಕು. ಹೊಸದಾಗಿ ಖರೀದಿಸಿದರಾಸುವನ್ನು ಕನಿಷ್ಠ  30 ದಿನಗಳವರೆಗೆ ಉಳಿದ ರಾಸುಗಳಿಂದ ದೂರವಿರಿಸಬೇಕು. ಕಂದುರೋಗ ಇರಬಹುದೆಂದು ಸಂಶಯಿಸಿದ ಸಂದರ್ಭಗಳಲ್ಲಿ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ರೋಗದ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಅಥವಾ ರೋಗ ಪತ್ತೆಗೆ ಕಾಲಕಾಲಕ್ಕೆ  ಹಾಲಿನ ಪರೀಕ್ಷೆ ಮಾಡಿಸಬೇಕು. ಜಾನುವಾರುಗಳ ಪ್ಲಾಸ್ಟೀಕರಿಸದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದಮಾನವರಿಗೂಈ ರೋಗವು ಹರಡುವ ಸಾಧ್ಯತೆಇರುತ್ತದೆ.
ಡಾ| ಮಂಜುನಾಥ ಪಾಳೆಗಾರ, ಪಶು ಇಲಾಖೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next