Advertisement
ಪ್ರತಿಭಟನೆ ನಿರತರನ್ನುದ್ದೇಶಿಸಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಅವರು ಮಾತನಾಡಿ, ಗಣಿಗಾರಿಕೆಯಿಂದಾಗಿ ದೇವಸ್ಥಾನ ಬಿರುಕುಬಿಟ್ಟಿದೆ. ಈ ಕ್ಷೇತ್ರದಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯ ಸ್ವಯಸೇವಕರೇ ಕ್ಷೇತ್ರದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
Related Articles
ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಕರಾವಳಿಗರು ಹಿಂದುತ್ವಕ್ಕಾಗಿ ಮತ ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಇಲ್ಲಿನವರ ಮತ ಬೇಕಿದ್ದರೆ ಹಿಂದುತ್ವದ ಮೇಲೆ ನಡೆಯುತ್ತಿರುವ ಅನ್ಯಾಯಗಳಿಗೆ ಸರಕಾರ ಪರಿಹಾರ ಒದಗಿಸಬೇಕು ಎಂದು ಹೇಳಿದರು.
Advertisement
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ನಮ್ಮ ಹೋರಾಟ ಗಣಿಗಾರಿಕೆ ವಿರುದ್ಧವಲ್ಲ, ಕಾರಿಂಜೇಶ್ವರ ಕ್ಷೇತ್ರದ ರಕ್ಷಣೆಯ ಪರ. ಇಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಕ್ಷೇತ್ರದ ಪಾವಿತ್ರ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಅನ್ಯಮತೀಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರು. ಮನವಿ ಸ್ವೀಕಾರ
ಪ್ರತಿಭಟನಕಾರರು ಡಿಸಿ ಕಚೇರಿ ಕಡೆ ತೆರಳಲು ಮುಂದಾದರೂ ಪೊಲೀಸರು ಅವಕಾಶ ನೀಡಲಿಲ್ಲ. ಹಾಗಾಗಿ ಕ್ಲಾಕ್‌ಟವರ್ ಬಳಿ ಸ್ವಾಮೀಜಿಗಳ ಸಹಿತ ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರಲ್ಲದೇ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಮನವಿ ಸ್ವೀಕರಿಸಿದರು. ಬೇಡಿಕೆಗಳು
– ಕಾರಿಂಜೇಶ್ವರ ಕ್ಷೇತ್ರದ ಪರಿಸರದಲ್ಲಿ ಗಣಿಗಾರಿಕೆಗೆ ಶಾಶ್ವತ ನಿಷೇಧ
-ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯವೆಂದು ಘೋಷಿಸಬೇಕು
-ಅಕ್ರಮ ಗಣಿಗಾರಿಕೆ, ಗೋಮಾಳ ಅತಿಕ್ರಮಣ, ಅರಣ್ಯ ಲೂಟಿ ಮಾಡಿದವರನ್ನು, ಬೆಂಬಲಿಸಿದವರನ್ನು ಬಂಧಿಸಬೇಕು. ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ
ಕ್ಷೇತ್ರ ಪರಿಸರದ 3 ಕಡೆ ನಡೆಯುತ್ತಿದ್ದ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕ್ಷೇತ್ರವನ್ನು ಧಾರ್ಮಿಕ ಸೂಕ್ಷ್ಮ ವಲಯವನ್ನಾಗಿ ಘೋಷಿಸಬೇಕೆಂಬ ಪ್ರತಿಭಟನಕಾರರ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಅವರು ತಿಳಿಸಿದರು.