Advertisement

ತಪ್ಪು ಜಾಹೀರಾತು ವಿರುದ್ಧ ಕ್ರಮ: ಪಿಎಂ

06:20 AM Oct 27, 2017 | Team Udayavani |

ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು ನೀಡುವ ಸಂಸ್ಥೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಕ್ಕಾಗಿ ಹೊಸ ನೀತಿಯನ್ನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೊಸ ಕಾನೂನಿನಿಂದ ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ದೂರು ಪರಿಹಾರ ಸಾಧ್ಯವಾಗಲಿದೆ. ಗ್ರಾಹಕರಿಗೆ ಹಕ್ಕುಗಳನ್ನು ನೀಡಿದರೆ, ಅವರ ಹಿತಾಸಕ್ತಿಗಳನ್ನು ರಕ್ಷಿಸಿದಂತಾಗದು ಎಂದು ಅವರು ಹೇಳಿದ್ದಾರೆ. ಈ ಹೊಸ ಕಾನೂನು ಗ್ರಾಹಕರ ಕಲ್ಯಾಣದಲ್ಲಿ ಅತ್ಯಂತ ಮಹತ್ವದ್ದಾಗಿರಲಿದೆ. ಇದಕ್ಕಾಗಿ ಶಾಸನಾತ್ಮಕ ಅಧಿಕಾರ ಹೊಂದಿರವ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆ. 1986ರ ಗ್ರಾಹಕ ರಕ್ಷಣೆ ಕಾನೂನಿನ ಬದಲಿಗೆ ಈ ಹೊಸ ಕಾನೂನು ಜಾರಿಗೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next