Advertisement

ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಆಗ್ರಹ

06:54 PM Jun 10, 2021 | Team Udayavani |

ಕೋಲಾರ: ಕೃಷಿ ಭೂಮಿಯ ಫಲವತ್ತತೆಗಾಗಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದ ರೈತನಿಗೆ 72 ಸಾವಿರದಂಡ ಹಾಕಿ ಅನ್ನದಾತರೊಬ್ಬರು ಹೃದಯಾಘಾತದಿಂದಸಾವನ್ನಪ್ಪಲು ಕಾರಣರಾದ ಕೆಜಿಎಫ್‌ ತಹಶೀಲ್ದಾರ್‌ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕಿ ರೂಪಕಲಾ ಶಶಿಧರ್‌ ಜಿಲ್ಲಾ ಧಿಕಾರಿಗಳನ್ನು ಆಗ್ರಹಿಸಿದರು.

Advertisement

ಘಟನೆ ಹಿನ್ನೆಲೆಯಲ್ಲಿ ನೊಂದ ರೈತ ಕುಟುಂಬದಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿಅವರನ್ನು ಭೇಟಿಯಾದ ರೂಪಕಲಾ ಶಶಿಧರ್‌, ಕಳೆದ ಒಂದು ವಾರದ ಹಿಂದೆ ಕೆಜಿಎಫ್‌ ತಾಲೂಕಿನಚಕ್ರಬಂಡೆ ಗ್ರಾಮದ ದೊಡ್ಡ ಕೆರೆಯಲ್ಲಿ ಅದೇ ಗ್ರಾಮದಚಂಗಾರೆಡ್ಡಿ ಎಂಬ ಮಣ್ಣು ತೆಗೆಯುತ್ತಿದ್ದರು. ಈ ವೇಳೆಸ್ಥಳಕ್ಕೆ ತೆರಳಿದ್ದ ತಹಶೀಲ್ದಾರ್‌ ಸುಜಾತ 2 ಟ್ರಾಕ್ಟರ್‌ಹಾಗೂ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು, ಪೊಲೀಸರಿಗೆ ದೂರು ನೀಡಿದ್ದರು.

ಈ ವೇಳೆ ವಾಹನಗಳನ್ನು ಬಿಡಿಸಿಕೊಳ್ಳಲು ದಲ್ಲಾಳಿಯೊಬ್ಬರ ಮೂಲಕ 11 ಸಾವಿರ ರೂ.ಗಳನ್ನು ತಹಶೀಲ್ದಾರ್‌ಗೆ ಲಂಚವಾಗಿ ನೀಡಲಾಗಿತ್ತು. ಆದರೂ ಗಣಿಮತ್ತು ಭೂವಿಜ್ಞಾನ ಇಲಾಖೆಯಿಂದ 72 ಸಾವಿರ ರೂ.ದಂಡ ಹಾಕಲಾಗಿದ್ದು, ದಂಡದ ಮೊತ್ತ ಕೇಳಿ ರೈತಚಂಗಾರೆಡ್ಡಿ ಹೃದಯಾಘಾತದಿಂದ ಮೃತಪಟ್ಟಿದ್ದರು.ಬಳಿಕ ಚಂಗಾರೆಡ್ಡಿ ಭಾವಮೈದ ಅಶೋಕ್‌ರೆಡ್ಡಿಮೀ. ಬಡ್ಡಿಗೆ ಹಣ ಪಡೆದು ದಂಡ ಕಟ್ಟಿ ಗಾಡಿಗಳನ್ನು ಬಿಡಿಸಿಕೊಂಡಿದ್ದಾರೆ.

ರೈತನ ಸಾವಿಗೆ ಕಾರಣವಾಗಿರುವತಹಶೀಲ್ದಾರ್‌ ಸುಜಾತ ವಿರುದ್ಧ ಕ್ರಮಕೈಗೊಂಡು,ಪಾವತಿಸಿರುವ ದಂಡವನ್ನು ಮಾನವೀಯತೆಯಿಂದವಾಪಸ್‌ ಕೊಡಿಸಬೇಕೆಂದು ಶಾಸಕಿ ಮತ್ತು ರೈತನ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಶಾಸಕಿ ರೂಪಕಲಾ ಶಶಿಧರ್‌ ಮಾತನಾಡಿ, ಕೆರೆಯಲ್ಲಿಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆದುಕೊಳ್ಳುವಸಂಬಂಧ ಮಾಹಿತಿ ಇಲ್ಲದೆ ಅವರು ಕೃಷಿ ಜಮೀನುಫಲವತ್ತತೆಗಾಗಿ ಮಣ್ಣು ಕೊಂಡೊಯ್ಯಲು ಬಂದಿದ್ದರು.ಆಗ ತಹಶೀಲ್ದಾರ್‌ ಅವರು ದಾಳಿ ನಡೆಸಿ, ವಾಸ್ತವಾಂಶತಿಳಿಯದೆ ಈ ರೀತಿ ತೊಂದರೆಯನ್ನುಂಟುಮಾಡಿದ್ದಾರೆ.ತಹಶೀಲ್ದಾರ್‌ ವರ್ತನೆಯಿಂದ ರೈತನ ಕುಟುಂಬಕ್ಕೆತೊಂದರೆಯಾಗಿದ್ದು, ಮುಂದೆ ಇಂತಹ ಘಟನೆಗಳುಮರುಕಳಿಸದಂತೆ ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next