Advertisement

ಸಮುದಾಯಕ್ಕೆ ಕೋವಿಡ್‌ 19 ಹರಡದಂತೆ ಕ್ರಮ: ಸಚಿವ

07:18 AM May 28, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ದಿನೇ, ದಿನೆ ಹೆಚ್ಚುತ್ತಿದ್ದರೂ ಸಮುದಾಯಕ್ಕೆ ಹರಡದಂತೆ ಕ್ರಮ ಕೈಗೊಂಡಿದ್ದೇವೆ. ಆದ್ದರಿಂದ ಜನರು ಭಯಪಡುವ ಆಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಜೆ.ಸಿ.ಮಾಧುಸ್ವಾಮಿ ಹೇಳಿದರು. ಕೋವಿಡ್‌ 19 ನಿಯಂತ್ರಣ ಸಂಬಂಧ ಜಿಪಂ ಸಭಾಂ ಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಹಸಿರು ವಲಯದಲ್ಲಿದ್ದ  ಹಾಸನ  ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಏರುತ್ತಿರುವುದು ಬೇಸರ ತರಿಸಿದೆ. ಆದರೆ ಸೋಂಕಿತರು ಹೊರ ರಾಜ್ಯಗಳಿಂದ ಬಂದವರ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರಿಂದ ಸ್ಥಳೀಯ ಸಮು ದಾಯಕ್ಕೆ ಹರಡಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸೋಂಕಿತರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ. ಹಾಗಾಗಿ ಜನರು ಆತಂಕಪಡಬೇಕಾಗಿಲ್ಲ ಎಂದರು.

ತಜ್ಞರ ಸಲಹೆ ಪಡೆದು ತೀರ್ಮಾನ: ಕೋವಿಡ್‌ 19 ಸೋಂಕಿತರು 14 ದಿನ ಚಿಕಿತ್ಸೆ ಪಡೆದ ನಂತರವೂ ಗುಣಮುಖ ರಾಗದೇ ಮತ್ತೆ ಪಾಸಿಟಿವ್‌ ಕಂಡು ಬರುತ್ತಿದೆ. ಹಾಸನ ಮತ್ತು ತುಮಕೂರು ಜಿಲ್ಲೆಯಲ್ಲಿ ಇಂತಹ ನಾಲ್ಕೈದು ಪ್ರಕರಣಗಳು  ಕಂಡು ಬಂದಿವೆ. ಈ ಬಗ್ಗೆ ತಜ್ಞರ ಸಲಹೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದ ಅವರು, ಮಹಾರಾಷ್ಟ್ರದಿಂದ ಬರುವರನ್ನು ಇನ್ನಷ್ಟು ದಿನ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ  ಮುಂದುವರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು ಹೇಳಿದರು.

ತಕ್ಷಣ ಪರಿಹಾರ ಕೊಡಲಾಗದು: ಕೋವಿಡ್‌ 19, ಲಾಕ್‌ಡೌನ್‌ ಪರಿಣಾಮ ದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನ ಸಮುದಾಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರದ ಪ್ಯಾಕೇಜ್‌ ಘೋಷಿ ಸಿವೆ. ಆದರೆ ರೈತರು, ಕೈಗಾರಿಕೋದ್ಯಮಿ ಗಳಿಗೆ ಆಗಿರುವ ನಷ್ಟದ ಅಂದಾಜು ಮಾಡಬೇಕು. ಅಸಂ ಘಟಿತ ವಲಯದ ಕಾರ್ಮಿಕರ ಪೈಕಿ ಅರ್ಹ ಫ‌ಲಾನುಭವಿಗಳನ್ನು ಗುರ್ತಿಸ ಬೇಕು. ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ.

ಇವೆಲ್ಲ ಒಂದೆರಡು ದಿನಗಳಲ್ಲಿ  ಆಗುವುದಿಲ್ಲ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಆರೋಪಕ್ಕೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಯಾವುದೇ ರಾಜ್ಯದ ಕಾರ್ಮಿಕರನ್ನೂ ನಾವು ಬಲವಂತವಾಗಿ ಹೊರಗೆ ಕಳುಹಿಸಿಲ್ಲ. ಹಾಗೆಯೇ  ಹೊರ ರಾಜ್ಯಗಳಲ್ಲಿದ್ದ ಕನ್ನಡಿಗರು ರಾಜ್ಯಕ್ಕೆ  ಮರಳದಂತೆ ತಡೆಯಲೂ ಸಾಧ್ಯವಿಲ್ಲ.ರಾಜ್ಯಗಳ ನಡುವೆ ಕಾರ್ಮಿಕರ ವಲಸೆ ಆರಂಭವಾಗಿದೆ. ಆದರೆ ಅವರಿಂದ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು. ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next