Advertisement

ಎಸ್‌ಎಫ್‌ಐ ಹೀನ ಕೃತ್ಯದ ವಿರುದ್ಧ ಕ್ರಮ: ಬಿಜೆಪಿ ಆಗ್ರಹ

10:33 PM Jun 27, 2019 | Sriram |

ಕುಂಬಳೆ: ಕೊಚ್ಚಿ ದೇವಸ್ವಂ ಬೋರ್ಡ್‌ ಅಧೀನದ ಕೇರಳವರ್ಮ ಕಾಲೇಜಿನಲ್ಲಿ ಅತೀ ಹೀನವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರವನ್ನು ಪ್ರದರ್ಶಿಸಿರುವ ಎಸ್‌.ಎಫ್‌.ಐ ಕಾರ್ಯಚಟುವಟಿಕೆ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಬಿ.ಜೆ.ಪಿ. ರಾಜ್ಯ ಸಮಿತಿ ಸದಸ್ಯ ಪಿ. ಸುರೇಶ್‌ ಕುಮಾರ್‌ ಶೆಟ್ಟಿ ಒತ್ತಾಯಿಸಿದ್ಧಾರೆ.

Advertisement

ಕುಂಬಳೆ ಬಿ.ಜೆ.ಪಿ. ಪಂಚಾಯತ್‌ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಬರಿಮಲೆ ಆಚಾರ ಸಂರಕ್ಷಣೆಗೆ ಭಂಗ ತರಲೆತ್ನಿಸಿದ ಎಡರಂಗಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿರುವ ಶಿಕ್ಷೆಯಿಂದ ಬುದ್ಧಿ ಕಲಿತಿಲ್ಲವೆಂದರು.

ಗ್ರಾಮ ಪಂಚಾಯತ್‌ ವತಿ ಯಿಂದ ಅಡಿಕೆ ಮತ್ತು ಇತರ ಕೃಷಿಕರಿಗೆ ಕೊಡಬೇಕಾದ ರೋಗ ನಿರೋಧಕ ಔಷಧಗಳನ್ನು ಸರಿಯಾದ ಸಮಯದಲ್ಲಿ ವಿತರಣೆ ಮಾಡಬೇಕಾದ ಸಂದರ್ಭದಲ್ಲಿ ವಿತರಣೆ ಮಾಡದೆ ಕೃಷಿಕರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಕೀಟನಾಶಕವನ್ನು ಸಿಂಪಡಿಸುವ ಸಮಯದಲ್ಲಿ ಕೃಷಿ ಭವನದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ರೋಗ ನಿರೋಧಕ ಔಷಧಗಳನ್ನು ವಿತರಿಸುವುದರಲ್ಲಿ ಪಂಚಾಯತ್‌ ಆಡಳಿತ ಸಮಿತಿಯ ಅವ್ಯವಸ್ಥೆಯಿಂದ ಕೃಷಿಕರಿಗೆ ನಷ್ಟ ಸಂಭವಿಸಿದೆ ಎಂಬುದಾಗಿ ಆರೋಪಿಸಿದರು.

ಸಭೆಯಲ್ಲಿ ಬಿಜೆಪಿ ಕುಂಬಳೆ ಪಂಚಾಯತ್‌ ಸಮಿತಿ ಅಧ್ಯಕ್ಷ ಕೆ. ಶಂಕರ ಆಳ್ವ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಎಸ್‌.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ. ಕಯ್ನಾರ್‌, ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಚ್‌. ಸತ್ಯಶಂಕರ ಭಟ್‌, ಮಂಡಲ ಉಪಾಧ್ಯಕ್ಷ ಕೆ. ವಿನೋದನ್‌ ಜಿಲ್ಲಾ ಸಮಿತಿ ಸದಸ್ಯ ರಮೇಶ್‌ ಭಟ್‌ ಮಂಡಲ ಕಾರ್ಯದರ್ಶಿ ಮಣಿಕಂಠ ರೈ,ಗ್ರಾಮ ಪಂಚಾಯತ್‌ ಸದಸ್ಯರಾದ ಸುಜಿತ್‌ ರೈ ಮತ್ತು ಪ್ರೇಮಲತ.ಎಸ್‌. ಮಾತನಾಡಿದರು.

ಪಂಚಾಯತ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರ ಕಾಮತ್‌ ಸ್ವಾಗತಿಸಿದರು. ಪಂಚಾಯತ್‌ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next