Advertisement

Thalaivar 170: ಗುರುವಿನೊಂದಿಗೆ ನಟಿಸುತ್ತಿದ್ದೇನೆ: ರಜನಿ

12:06 AM Oct 26, 2023 | Team Udayavani |

ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ರ ಸಿನಿಮಾ “ತಲೈವರ್‌ 170” ಶೂಟಿಂಗ್‌ ಆರಂಭಗೊಂಡಿದೆ.

Advertisement

ತಲೈವಾ ಜತೆಗೆ ಬಾಲಿವುಡ್‌ ಲೆಜೆಂಡರಿ ಸ್ಟಾರ್‌ ಅಮಿತಾಬ್‌ ಬಚ್ಚನ್‌ ನಟಿಸುತ್ತಿದ್ದಾರೆ. ಇಬ್ಬರು ಜತೆಗಿರುವ ಫೋಟೋ ಅನ್ನು ಟ್ವಿಟರ್‌(ಎಕ್ಸ್‌)ನಲ್ಲಿ ಬುಧವಾರ ಹಂಚಿಕೊಂಡಿರುವ ರಜನೀಕಾಂತ್‌, “ಟಿ.ಜೆ.ಜ್ಞಾನವೇಲ್‌ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ “ತಲೈವರ್‌ 170′ ಸಿನಿಮಾದಲ್ಲಿ ನನ್ನ ಗುರು, ವಿದ್ಯಮಾನ್‌ ಶ್ರೀ ಅಮಿತಾಬ್‌ ಬಚ್ಚನ್‌ ಅವರೊಂದಿಗೆ 33 ವರ್ಷಗಳ ನಂತರ ಪುನಃ ಒಟ್ಟಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. 1991ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ “ಹಮ್‌’ನಲ್ಲಿ ಇಬ್ಬರು ಜತೆಯಾಗಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next