Advertisement
ನಾಗರಹೊಳೆ ಉದ್ಯಾನದ ಹೆಬ್ಟಾಗಿಲು ವೀರನಹೊಸಹಳ್ಳಿ ಕಚೇರಿ ಬಳಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅರಣ್ಯಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದ ತಕ್ಷಣವೇ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು, ಜೊತೆಗೆ ನೀರಿನ ಸಂಪನ್ಮೂಲ, ಸಮುದಾಯದ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡಿರಬೇಕು, ಮುಖ್ಯವಾಗಿ ಬೆಂಕಿ ರೇಖೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮುಂಜಾಗ್ರತೆವಹಿಸಬೇಕು ಎಂದರು.
Related Articles
Advertisement
ಮುನ್ನೆಚ್ಚರಿಕೆ ಅತ್ಯಗತ್ಯ: ಅಗ್ನಿಶಾಮಕ ದಳದ ಅಧಿಕಾರಿಗಳಾದ ಲತೇಶ್‌ಕುಮಾರ್ ಹಾಗೂ ದಿನೇಶ್ ಆನಂದ್ ಮಾತನಾಡಿ, ಬೆಂಕಿಯಲ್ಲಿ ಅನೇಕ ತರದ ಬೆಂಕಿ ಅವಘಡಗಳಿದ್ದು, ಅರಣ್ಯಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ದೊಡ್ಡ ಉಪಾಯ, ಇನ್ನು ಬೆಂಕಿ ಬಿದ್ದ ವೇಳೆ ದಟ್ಟಹೊಗೆ ಆವರಿಸಲಿದ್ದು, ಆ ವೇಳೆ ಮಲಗಿಕೊಳ್ಳುವ ಮೂಲಕ ಹೊಗೆಯಿಂದ ತಪ್ಪಿಸಿಕೊಳ್ಳಬಹುದು, ಮೊದಲೇ ರಸ್ತೆ, ನೀರನ್ನು ಸಾಗಿಸುವ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಥರ್ಮಲ್ ಡ್ರೋಣ್ ಬಳಕೆ: ಇದೇ ಮೊದಲ ಬಾರಿಗೆ ಪರಿಚಯಿಸುತ್ತಿರುವ ಥರ್ಮಲ್ ಡ್ರೋಣ್ ಹಾರಾಟ, ಸೆರೆ ಹಿಡಿಯುವ, ವಾತಾವರಣದ ಉಷ್ಣಾಂಶ ತಿಳಿಸುವ ಹಾಗೂ ಅರಣ್ಯದ ಸಂಪೂರ್ಣ ಚಿತ್ರಣವನ್ನು ನೀಡುವ ಕಾರ್ಯವೈಖರಿ ಬಗ್ಗೆ ಹಾಗೂ ಬೆಂಕಿ ಬಿದ್ದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ, ನಂದಿಸುವ ಕುರಿತು ಅಗ್ನಿಶಾಮಕದಳವು ಪ್ರಾತ್ಯಕ್ಷಿತೆ ಮೂಲಕ ಮಾಹಿತಿ, ಅಲ್ಲದೆ ವಿವಿಧ ಪರಿಕರಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಬಗೆಯೂ ಸಮಗ್ರ ತರಬೇತಿ ನೀಡಲಾಯಿತು.
ಬೆಂಕಿ ನಿಯಂತ್ರಣದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಸಿಎಫ್‌ಗಳಾದ ಪೌಲ್‌ಆಂಟೋಣಿ, ಕೇಶವ್‌ಗೌಡ, ಆರ್‌ಎಫ್‌ಒಗಳಾದ ಸುಬ್ರಮಣ್ಯ, ವಿನಯ್, ಡಿಆರ್‌ಎಫ್‌ಒ ಕುಮಾರಸ್ವಾಮಿ ಅರಣ್ಯ ರಕ್ಷಕರಾದ ಸುನಿಲ್‌ಕಟಕಿ, ಸತೀಶ್, ರಾಮು, ಮೋಹನ್ ಮತ್ತಿತರರು ತಮ್ಮ ಅನುಭವವನ್ನು ಹಂಚಿಕೊಂಡರು. ಎಲ್ಲ 8 ವಲಯಗಳ ವಲಯ ಅರಣ್ಯಾಧಿಕಾರಿಗಳು, ಡಿಆರ್‌ಎಫ್‌ಒಗಳು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಭಾಗವಹಿಸಿದ್ದರು.
4 ಕಿ.ಮೀ.ವರೆಗೆ ಡ್ರೋಣ್ ಕಾರ್ಯಾಚರಣೆ: ಈ ಥರ್ಮಲ್ ಡ್ರೋಣ್ ಸ್ಥಳದಿಂದ 4 ಕಿ.ಮೀ.ವರೆಗೆ ಅರಣ್ಯ ಪ್ರದೇಶದಲ್ಲಿನ ಆಗು ಹೋಗುಗಳನ್ನು ಬಗ್ಗೆ ಟ್ಯಾಬ್ ಪರದೆಯ ಮೂಲಕ ವೀಕ್ಷಿಸಬಹುದಾಗಿದ್ದು, ಇದರಿಂದ ಒಂದೆಡೆ ಕುಳಿತು ಮಾಹಿತಿ ಪಡೆಯಬಹುದಾಗಿದೆ ಎಂಬುದನ್ನು ಪ್ರಾತ್ಯಕ್ಷತೆ ಮೂಲಕ ಸಿಬ್ಬಂದಿಗೆ ತಿಳಿಸಿಕೊಡಲಾಯಿತು. ಪ್ರತಿವಲಯಕ್ಕೂ ಡ್ರೋಣ್ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ ಎಂದು ಸಿಎಫ್ ನಾರಾಯಣಸ್ವಾಮಿ ತಿಳಿಸಿದರು.