Advertisement
ಅವರ ಧರ್ಮವನ್ನು ಅವರು ಸ್ವತಂತ್ರವಾಗಿ ರಕ್ಷಣೆ ಮಾಡಬಹುದು. ಯಾರು ಭಯ ಪಡುವ ಅವಶ್ಯಕತೆ ಇಲ್ಲಬಲವಂತವಾಗಿ ಮತಾಂತರ ಮಾದಬಾರದು, ಹೀಗಾಗಿ ಕಾಯ್ದೆ ತರುತ್ತಿರುವುದು.ಅವರ ಬಿಸಿನೆಸ್ ಬಂದ್ ಆಗುತ್ತದೆ ಅಂತ ಹೀಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಗೂ ಇಂದೊಂದು ಬಿಸಿನೆಸ್. ಕಾಯ್ದೆ ತರುವುದು ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಎಂದರು.
Related Articles
Advertisement
ರಮೇಶ್ ಜಾರಕಿಹೊಳಿ ಮೇಲೆ ಧಮ್ ಇದ್ರೆ ಕ್ರಮಜರುಗಿಸಲೇ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ನಾನು ನಿಮಗೆ ಧಮ್ ಇದ್ದಿದ್ರೆ ಚಾಮುಂಡೇಶ್ವರಿ ಯಲ್ಲಿ ಸೊಲುತ್ತಿದ್ರೆ ಅಂತಾ ಕೇಳಿದರೆ, ಅವರಿಗೆ ನೋವಾಗುತ್ತದೆ, ಹೀಗಾಗಿ ನಾನು ಅದನ್ನ ಹೇಲುವುದಕ್ಕೆ ಹೋಗುವುದಿಲ್ಲ ಎಂದರು.
ಬೆಳಗಾವಿಯಲ್ಲಿ ೧೩ ವಿಧಾನ ಸಭೆ ಶಾಸಕರು, ಇಬ್ಬರು ಸಂಸದರು ಒಬ್ಬರು ರಾಜ್ಯ ಸಭಾ ಸದಸ್ಯರಿದ್ದರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿಲ್ಲ ಅನ್ನುವುದು ಕಾರ್ಯಕರ್ತರ ಅಭಿಪ್ರಾಯ. ರಮೇಶ್ ಜಾರಕಿಹೊಳಿ ಬಗ್ಗೆ ಎಲ್ಲವೂ ಪಕ್ಷದ ವೇದಿಕೆಯಲ್ಲಿ ಇವೆಲ್ಲವನ್ನು ಚರ್ಚಿಸುತ್ತೇವೆ ಎಂದರು.
ಬಹುಮತ ಸಾಬೀತಿಗೆ ಲಖನ್ ಹಾಗೂ ಜೆಡಿಎಸ್ ಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣ ನಿಂತ ನೀರಲ್ಲ, ಯಾವ್ಯಾವ ಸಂದರ್ಭಕ್ಕೆ ಆಯಾ ಕಾಲಘಟ್ಟಕ್ಕೆ ಏನಾಗಬೇಕೋ ಅದು ಮಾಡಬೇಕಾಗುತ್ತದೆ. ರಾಜಕೀಯದಲ್ಲಿ ಮರೆಯುವ ಗುಣವೂ ಇರಬೇಕು. ಜನಮತ ಸಂಪಾದನೆ ಬರಬೇಕು. ಅದಕ್ಕೆ ಮುಂಬುರವ ವಿಧಾನ ಸಭೆ ಚುನಾವಣೆ ಬಿಜೆಪಿಯ ಗುರಿಯಾಗಿದೆ ಎಂದರು.