ಕೊಲ್ಕತ್ತಾ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಪದೇ ಪದೆ ಟೀಕಾ ಪ್ರಹಾರ ಮಾಡು ತ್ತಿರುವ ಸಂಸದ ಅಧೀರ್ ರಂಜನ್ ಚೌಧರಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಸಿ ಮುಟ್ಟಿಸಿದ್ದಾರೆ. “ಪಕ್ಷದ ವರಿಷ್ಠರು ನೀಡಿದ ಸೂಚನೆಯಂತೆ ವರ್ತಿಸಿ. ಇಲ್ಲದೇ ಇದ್ದರೆ ನಿಮ್ಮ ನಿರ್ಧಾರವನ್ನು ಕೈಗೊಳ್ಳಬ ಹುದು’ ಎಂದು ತಾಕೀತು ಮಾಡಿದ್ದಾರೆ. ಮಮತಾ ಬ್ಯಾನರ್ಜಿಯವರು ಇಂಡಿಯಾ ಒಕ್ಕೂಟಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅಧೀರ್ ರಂಜನ್ ಚೌಧರಿಯವರು “ದೀದಿ ಒಕ್ಕೂಟ ದಿಂದ ಪರಾರಿಯಾಗಿದ್ದಾರೆ’ ಎಂದು ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆಯವರು “ಮಮತಾ ಅವರು ಇಂಡಿಯಾ ಒಕ್ಕೂಟದ ಭಾಗವಾಗಿ ದ್ದಾರೆ. ಒಕ್ಕೂಟದಲ್ಲಿ ಅವರು ಇರುವ ಬಗ್ಗೆ ಅಧಿರ್ ರಂಜನ್ ಒಬ್ಬರೇ ನಿರ್ಧರಿಸುವುದಿಲ್ಲ. ಅದಕ್ಕೆ ಹೈಕಮಾಂಡ್ ಇದೆ. ನಾವು ಏನು ನಿರ್ಧಾರ ತೆಗೆದುಕೊಳ್ಳುತ್ತೇವೊ ಅದು ಪಾಲನೆಯಾಗಬೇಕು’ ಎಂದು ಹೇಳಿದ್ದಾರೆ.
ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಚೌಧರಿ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಟಿಎಂಸಿ ವಿರುದ್ಧ ನನ್ನ ಹೋರಾಟ ವೈಚಾರಿಕವಾದದ್ದು. ಬಂಗಾಲ ದಲ್ಲಿ ಬಿಜೆಪಿ ಹಾಗೂ ಟಿಎಂಸಿಯಿಂದ ಕಾಂಗ್ರೆಸ್ ರಕ್ಷಿಸಲು ನಾವು ಹೋರಾಡುತ್ತಿದ್ದೇವೆ ಎಂದಿದ್ದಾರೆ.
ಖರ್ಗೆ ಹೋರ್ಡಿಂಗ್ ವಿರೂಪ: ಪೊಲೀಸರಿಗೆ ದೂರು
ಕೋಲ್ಕತಾದಲ್ಲಿರುವ ಪಶ್ಚಿಮ ಬಂಗಾಲ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದಲ್ಲಿ ರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್, ಹೋರ್ಡಿಂಗ್‌ಗಳನ್ನು ವಿರೂಪಗೊಳಿಸಲಾಗಿದೆ.
ಐಎನ್‌ಡಿಐಎ ಗೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಯರ ನಿಷ್ಠೆ ಎಷ್ಟಿದೆ ಎಂದು ಪ್ರಶ್ನಿಸಿದ್ದ ಸಂಸದ ಅಧೀರ್ ರಂಜನ್ ಚೌಧರಿಯವ ರನ್ನು ತರಾಟೆಗೆ ತೆಗೆದುಕೊಂಡ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.
ಖರ್ಗೆಯವರು ಟಿಎಂಸಿ ಏಜೆಂಟ್ ಎಂದು ಬರೆಯಲಾಗಿತ್ತು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇದೆ ಎಂದು ಆರೋಪಿಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.