ಬೆಳ್ತಂಗಡಿ: ಕಳೆದ 12 ವರ್ಷಗಳಿಂದ ತಮ್ಮ ಕೃಷಿ ಭೂಮಿಯಲ್ಲಿ ಅತೀ ಹೆಚ್ಚು ಜಲಸಂರಕ್ಷಣಾ ವಿಧಾನಗಳನ್ನು ಸರಳ ರೂಪದಲ್ಲಿ ಅಳವಡಿಸಿರುವ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಪ್ರಗತಿಪರ ಕೃಷಿಕ ಡೇವಿಡ್ ಜೈಮಿ ಅವರಿಗೆ ವಿಶ್ವದಾಖಲೆಯ ಗರಿ ಒಲಿದಿದೆ.
ಬಿ.ಕಾಂ. ಪದವೀಧರರಾಗಿರುವ ಡೇವಿಡ್ ಜೈಮಿ ಎರಡೂವರೆ ಎಕ್ರೆ ಭೂಮಿಯಲ್ಲಿ ರಬ್ಬರ್, ಕಾಳು ಮೆಣಸು, ತೆಂಗು, ತರಕಾರಿ ಬೆಳೆದು ಕೊಂಡು 6ಕ್ಕೂ ಅಧಿಕ ಸರಳ ರೂಪದ ಮಳೆ ನೀರು ಕೊçಲು ವಿಧಾನವನ್ನು ಅಳವಡಿಸಿದ ಸಲುವಾಗಿ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗೆ ಪಾತ್ರರಾಗಿದ್ದಾರೆ.
ಮಾ. 23ರಂದು ಪ್ರಶಸ್ತಿ ಅವರ ಕೈ ಸೇರಿದೆ. ಮನೆಯ ಛಾವಣಿಯಿಂದ ಮಳೆ ನೀರು ಕೊçಲು ಮಾಡಿ ಬಾವಿಗೆ ಇಂಗಿಸುವುದು, ಮಳೆನೀರು ಕೊಯ್ಲು ಮಾಡಿ ಮನೆಯ ಟ್ಯಾಂಕ್‌ಗೆ ತುಂಬಿಸುವ ವಿಧಾನ, ಛಾವಣಿ ನೀರನ್ನು ಇಂಗುಗುಂಡಿಗೆ ಬಿಡುವುದು, ಹರಿವ ನೀರನ್ನು ಇಂಗಿಸುವುದು, ಮರದಿಂದ ಬೀಳುವ ನೀರು, ಹುತ್ತದ ಮೂಲಕ ಭೂಮಿಗೆ ನೀರಿಂಗಿಸುವ ವಿಶೇಷ ವಿಧಾನಕ್ಕೆ ವಿಶ್ವದಾಖಲೆಯ ಪ್ರಶಸ್ತಿ ಸಂದಿದೆ.
ಕಡುಬೇಸಗೆಯಲ್ಲೂ ಅವರ ಬಾವಿಯಲ್ಲಿ ನೀರಿ ಆವಿಯಾಗುವುದಿಲ್ಲ. ಜತೆಗೆ ಕೃಷಿಕಗೆ ಸಹಿತ ಅತಿ ಸರಳ ಮಳೆ ಕೊçಲು ಸಂಶೋಧನೆಯನ್ನು ಮಂಗಳೂರು ಮೀನುಗಾರಿಕಾ ಇಲಾಖೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಹಿತ ಇವರ ಸರಳ ವಿಧಾನದ ಮಳೆ ಕೊçಲು ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಭೂಮಿಗೆ ನೀರಿಂಗಿಸುವ ಕಲ್ಪನೆ ಎಲ್ಲರಲ್ಲೂ ಬೆಳೆಯಬೇಕು. ಅಂತರ್ಜಲ ಸಮೃದ್ಧವಾಗಿದ್ದಲ್ಲಿ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ. ಎಲ್ಲರೂ ಮಳೆ ನೀರು ಕೊಯ್ಲು ವಿಧಾನವನ್ನು ಅನುಸರಿಸಬೇಕೆಂಬುದು ನನ್ನ ಆಶಯ.
– ಡೇವಿಡ್ ಜೈಮಿ, ಕೊಕ್ಕಡ