Advertisement

ಸಾಧಕರಿಗೆ “ಕಾಯಕವೇ ಕೈಲಾಸ’ಪ್ರಶಸ್ತಿ ಪ್ರದಾನ

12:18 PM Sep 22, 2018 | Team Udayavani |

ಹೂವಿನಹಡಗಲಿ: ಮೊದಲಿನಿಂದಲೂ ಜೆಸಿಐ ಸಂಸ್ಥೆ ಸಮಾಜಮುಖೀ ಕಾರ್ಯ ಮಾಡುತ್ತಾ ಬಂದಿದ್ದು, ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಅವರ ಕಾಯಕವನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಜೆಸಿಐ ಸಂಸ್ಥೆ ಅಧ್ಯಕ್ಷ ಡಾ| ಸೋಮಶೇಖರ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪೊಲೀಸ್‌ ಇಲಾಖೆ, ಅಂಚೆ ಇಲಾಖೆ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ, ಆಟೋ ಚಾಲಕ ಸಂಘ, ಕೆಎಸ್‌ಆರ್‌ಟಿಸಿ ಇಲಾಖೆ ಹಾಗೂ ಪುರಸಭೆ ಪೌರ ಕಾರ್ಮಿಕರಿಗೆ ಈ ಬಾರಿ ಅವರ ಕರ್ತವ್ಯ ನಿಷ್ಠೆ ಗುರುತಿಸಿ ಉತ್ತಮ ಸೇವಾ ಕಾರ್ಯನಿರತ ಪ್ರಶಸ್ತಿಯಾದ “ಕಾಯಕವೇ ಕೈಲಾಸ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್‌ ಕೆ. ರಾಘವೇಂದ್ರರಾವ್‌, ವಿವಿಧ ಕ್ಷೇತ್ರಗಳಲ್ಲಿ ಗುರುತರ ಕೆಲಸ ಮಾಡಿದವರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿದರೆ ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೆಣೆಯಾಗುತ್ತದೆ. ಜೆಸಿಐ ಇಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಗವಿಮಠದ ಡಾ| ಹಿರಿಶಾಂತವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿಕಟಪೂರ್ವ ಅಧ್ಯಕ್ಷ ಜೆಸಿಐ ಗಾಡ್ವಿನ್‌ ಸುಧಾಕರ್‌, ಜೆಸಿಐ ಭರತ್‌ ಕುಮಾರ್‌, ಚೌವ್ಹಾಣ್‌, ಜೆಸಿಐ ಡಾ| ಲಕ್ಷ್ಮಣನಾಯ್ಕ, ಡಾ| ಪ್ರಕಾಶ್‌ ಆಟವಾಳಗಿ, ಜೆಸಿಐ ದ್ವಾರಕೀಶ್‌ರೆಡ್ಡಿ, ಕೃಷ್ಣರೆಡ್ಡಿ, ಕಿರಣ್‌ಕುಮಾರ್‌ ಜೈನ್‌, ಎ.ಕೆ.ನಾಗರಾಜ್‌, ಡಾ| ಜೆ.ಡಿ.ಉಮೇಶ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next