Advertisement

ಕಾಪು ಯುವಕನ ಸಾಧನೆ: ಎನ್‌ಫೀಲ್ಡ್‌ ಬೈಕಲ್ಲಿ ಭಾರತ ಪರ್ಯಟನೆ

03:45 AM Jul 05, 2017 | Harsha Rao |

ಪಡುಬಿದ್ರಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಯಲ್‌ ಎನ್‌ಫೀಲ್ಡ್‌ ಬೈಕಲ್ಲಿ ಯಶಸ್ವಿಯಾಗಿ ಪರ್ಯಟನೆ ಮುಗಿಸಿ ವಾಪಸಾದ ಕಾಪುವಿನ ಸಚಿನ್‌ ಕೊಂಬಗುಡ್ಡೆ ಅವರನ್ನು ಕಾಪು ಎಸ್‌ಕೆಪಿಎ ಸದಸ್ಯರು ಹೆಜಮಾಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಿದರು.

Advertisement

ಮೇ 28ರಂದು ಕಾಪುವಿನಿಂದ ಹೊರಟಿದ್ದ ಸಚಿನ್‌ 16 ರಾಜ್ಯ, 11,000 ಕಿ.ಮೀ. ದೂರವನ್ನು ಕೇವಲ 37 ದಿನಗಳಲ್ಲಿ ಕ್ರಮಿಸಿದ್ದಾರೆ. ಸ್ವಯಂ ಸಿನೆಮಾಟೋಗ್ರಾಫರ್‌ ಆಗಿರುವ ಸಚಿನ್‌ ಫೋಟೋ ಶೂಟ್‌ ನಿಷ್ಣಾತರಾಗಿದ್ದು ಭಾರತದ ಕುರಿತ ಕಿರುಚಿತ್ರ ಮಾಲಿಕೆ ತಯಾರಿಸುವ ಉದ್ದೇಶದೊಂದಿಗೆ ಯಾತ್ರೆ ಕೈಗೊಂಡಿದ್ದರು.

ಜಮ್ಮು ಕಾಶ್ಮೀರದ ತಡೆಯಲಾರದ ಚಳಿ, ರಾಜಸ್ಥಾನದಲ್ಲಿನ 51 ಡಿಗ್ರಿ ಬಿಸಿಯನ್ನೂ ಕೂಡ ಸಹಿಸಿಕೊಂಡು ದೇಶಾದ್ಯಂತ ಸಂಚರಿಸಿದ ಸಚಿನ್‌ಗೆ ಒಂದೆರಡು ಕಡೆ ಬೈಕ್‌ ಕೈಕೊಟ್ಟು ಆತಂಕ ಎದುರಾಗಿತ್ತು. ಆ ಕ್ಷಣದಲ್ಲಿ ರಾಯಲ್‌ ಎನ್‌ಫೀಲ್ಡ್‌ ಕಂಪೆನಿಯು ಇವರ ನೆರವಿಗೆ ಧಾವಿಸಿ ಬಂದಿದೆ. ರಾತ್ರಿ 12ರ ವರೆಗೂ ಕೆಲವೊಮ್ಮೆ ಬೈಕ್‌ ಚಾಲನೆ ಮಾಡುತ್ತಿದ್ದೆ ಎಂದಿದ್ದಾರೆ. ಕಾಶ್ಮೀರದ ಲೇಹ್‌, ಕಾರ್ಗಿಲ್‌ ಮತ್ತು ಲಡಾಕ್‌ಗಳಂತಹ ಅತೀ ಎತ್ತರದ ಪ್ರದೇಶಗಳಲ್ಲಿ ಇವರಿಗೆ ಮಂಗಳೂರಿನ ಎಸ್‌ಡಿ ಜಾವಾ ಮೋಟಾರ್‌ ಬೈಕ್‌ ಕ್ಲಬ್‌ ಸದಸ್ಯರು ಜತೆಯಾಗಿದ್ದರು. ಮುಂದಕ್ಕೆ ಪ್ರೋತ್ಸಾಹ ದೊರೆತಲ್ಲಿ ವಿಶ್ವ ಪರ್ಯಟನೆ ಮಾಡುವ ಹೆಬ್ಬಯಕೆ ಇರುವುದಾಗಿ ಸಚಿನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next