Advertisement
ಆರೋಪಿ ಮಂಜುನಾಥ್ ವಿರುದ್ಧ ಚಂದ್ರಲೇಔಟ್ ಠಾಣೆ ಪೊಲೀಸರು ಸಲ್ಲಿಸಿದ್ದ ದೋಷಾರೋಪಪಟ್ಟಿ, ಸಾಕ್ಷ್ಯಾಧಾರಗಳು. ಬಾಲಕನ ಪೋಷಕರ ಹೇಳಿಕೆಗಳು, ಸಿಸಿಟಿವಿ ಪೂಟೇಜ್ ಸಾಕ್ಷ್ಯ ಹಾಗೂ ಪ್ರಾಸಿಕ್ಯೂಶನ್ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ತೀರ್ಪು ನೀಡಿದೆ. ಆರೋಪಿ ಮಂಜುನಾಥ್ ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವನ್ನು ನೆರೆಮನೆಯ ನಿವಾಸಿ ಮಹಿಳೆ ಯೊಬ್ಬರು ಆತನ ಪೋಷಕರಿಗೆ ತಿಳಿಸಿದ್ದರು.ಇದರಿಂದ ಕೋಪಗೊಂಡಿದ್ದ ಮಂಜುನಾಥ್, ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಆಕೆಯ ಪುತ್ರ ಕಿರಣ್‌ನನ್ನು 2015ರ ಫೆ. 4ರಂದು ಶಾಲೆಯ ಬಳಿ ತೆರಳಿ ನಿನ್ನ ತಮ್ಮನಿಗೆ ಅಪಘಾತವಾಗಿದೆ ಎಂದು ನಂಬಿಸಿ ಬೈಕ್‌ನಲ್ಲಿ ಕರೆದೊಯ್ದಿದ್ದ. ಬಳಿಕ ಜ್ಞಾನಭಾರತಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದ. ಬಾಲಕನ ಪೋಷಕರ ದೂರಿನ್ವಯ ಚಂದ್ರ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಜುನಾಥ್‌ನನ್ನು ಬಂಧಿಸಿ ವಿಚಾರಣೆಗೊಳ ಪಡಿಸಿದಾಗ ಕೃತ್ಯ ಬಯಲಾಗಿತ್ತು.