Advertisement

ನಿಥಾರಿ ಸರಣಿ ಕೊಲೆಗಳ ಆರೋಪಿಗಳು ಖುಲಾಸೆ!

08:33 PM Oct 16, 2023 | Pranav MS |

ನವದೆಹಲಿ: ಉತ್ತರಪ್ರದೇಶದ ನೋಯ್ಡಾದಲ್ಲಿ 2005-06ರಲ್ಲಿ ನಡೆದ ಭೀಕರ ಸರಣಿ ಕೊಲೆಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದವು. ಆ ಪ್ರಕರಣದ ಮುಖ್ಯ ಆರೋಪಿಗಳಾದ ಸುರಿಂದರ್‌ ಕೋಲಿ, ಮಣಿಂದರ್‌ ಸಿಂಗ್‌ ಪಂಧೇರ್‌ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.

Advertisement

ಈ ಪ್ರಕರಣ 17 ವರ್ಷಗಳ ಕಾಲ ಎಳೆದಾಡಿತ್ತು. ಮುಖ್ಯ ಆರೋಪಿ ಕೋಲಿ 12 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರೆ, ಮಣಿಂದರ್‌ 2 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಇಬ್ಬರಿಗೂ ವಿಧಿಸಲಾಗಿದ್ದ ಮರಣದಂಡನೆ ರದ್ದಾಗಿದೆ. ಅಲಹಾಬಾದ್‌ ಉಚ್ಚ ನ್ಯಾಯಾಲಯದ ತೀರ್ಪಿನ ನಂತರ, ತಪ್ಪಿತಸ್ಥರು ಯಾರು ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ.

ನೋಯ್ಡಾದ ನಿಥಾರಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸರಣಿ ಕೊಲೆಗಳು ನಡೆದಿದ್ದವು. ಮಣಿಂದರ್‌ ಸಿಂಗ್‌ ಮನೆಯಲ್ಲಿ ಸುರಿಂದರ್‌ ಕೆಲಸಗಾರನಾಗಿದ್ದ. ಈ ಮನೆಯ ಸುತ್ತಮುತ್ತ ಮೂಳೆಗಳು, ಶವಗಳು ಸಿಕ್ಕಿದ್ದವು. ಅದನ್ನು ದೆವ್ವದ ಮನೆ ಎಂದೇ ಹೇಳಲಾಗುತ್ತಿತ್ತು. ಕೊಲೆ, ಅತ್ಯಾಚಾರ, ದೇಹವನ್ನು ಛಿದ್ರಗೊಳಿಸಿದ್ದೂ ಸೇರಿ ಇಬ್ಬರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. 20 ವರ್ಷದ ಮಹಿಳೆಯನ್ನು ಕೊಂದ ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರಾಗಿದ್ದರು. ಒಂದು ಹಂತದಲ್ಲಿ ಕೋಲಿ ಶವಸಂಭೋಗ ಮಾಡಿದ್ದು, ದೇಹದ ಅಂಗಗಳನ್ನು ತಿಂದಿದ್ದನ್ನು ಒಪ್ಪಿಕೊಂಡೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next