Advertisement

ಕೋವಿಡ್‌ ಲಸಿಕೆ ನೀಡುವಲ್ಲಿ ವಿಫಲ- ಆರೋಪ

01:37 PM Jul 03, 2021 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ನಾಗರಾಜ್‌ಕಂಕಾರಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಕೋವಿಡ್‌ನ‌ ಎರಡೂ ಅಲೆಯಲ್ಲಿ ಜನಸಾಮಾನ್ಯರು ಸಿಲುಕಿದ್ದು,ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಮೂರನೇ ಅಲೆಯ ಆತಂಕವಿದೆ. ಲಸಿಕೆ ನೀಡುವ ಕಾರ್ಯತುಂಬಾ ಹಿಂದೆ ಉಳಿದಿದ್ದು, ಲಸಿಕೆಹಾಕಿಸಿಕೊಳ್ಳಲು ಪರದಾಡುವಂತಾಗಿದೆ.ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆಖಾಲಿಯಾಗಿದೆ ಎಂದು ಅಧಿಕಾರಿಗಳುಹೇಳುತ್ತಾರೆ. ಲಸಿಕೆ ನೀಡುವಲ್ಲಿ ಆರೋಗ್ಯಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ವಾರದ ಒಂದು ದಿನ ಆರೋಗ್ಯ ಕೇಂದ್ರದ ವ್ಯಾಪ್ತಿಯೊಳಗಿನ ಸಮುದಾಯ ಭವನಅಥವಾ ಶಾಲಾ- ಕಾಲೇಜುಗಳಲ್ಲಿಲಸಿಕೆ ನೀಡಬೇಕು. ಏಕೆಂದರೆ ಲಸಿಕೆತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುವನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 18 -44 ವರ್ಷದೊಳಗಿನಎಲ್ಲರಿಗೂ ಜೂ.21 ರೊಳಗೆ ಲಸಿಕೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.ಆದರೆ, ಆ ಭರವಸೆ ಹಾಗೆಯೇ ಇವೆ.ಲಸಿಕೆ ಅಭಾವ ಸೃಷ್ಟಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಸಿಗುವ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೆ ಸಿಗುತ್ತಿಲ್ಲ ಎಂದು ದೂರಿದರಲ್ಲದೆ ಜಿಲ್ಲೆಯ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆಗ್ರಹಿಸಿದರು.

ಎಚ್‌. ಪಾಲಾಕ್ಷಿ, ನರಸಿಂಹ ಗಂಧದಮನೆ, ಶ್ಯಾಮ್‌,ಅನಿಲ್‌ ಕುಮಾರ್‌, ಸುಂದರ್‌, ವಿನಯ್‌,ಭಾಸ್ಕರ, ನವಿಲೆ ಮಂಜುನಾಥ್‌, ರಾಜಮ್ಮ, ಶಾಂತಾ ಸುರೇಂದ್ರ, ಕವಿತಾ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next