Advertisement

ಚೆಕ್‌ಪೋಸ್ಟ್‌ಗಳಲ್ಲಿ ವಸೂಲಿ ದಂಧೆ: ಎಚ್‌ಡಿಕೆ ಆರೋಪ 

12:56 PM Nov 12, 2017 | |

ಬೆಂಗಳೂರು: ಜಿಎಸ್‌ಟಿ ಜಾರಿಯಾದ ಬಳಿಕ ದೇಶಾದ್ಯಂತ ಚೆಕ್‌ ಪೋಸ್ಟ್‌ ಬಂದ್‌ ಮಾಡಲಾಗಿದೆ. ಆದರೂ ಕರ್ನಾಟಕದಲ್ಲಿ ಚೆಕ್‌ ಪೋಸ್ಟ್‌ಗಳಲ್ಲಿ ನಿತ್ಯ 30ಲಕ್ಷ ರೂ.ವರೆಗೆ ರೌಡಿಗಳ ಮೂಲಕ ವಸೂಲಿ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಶನಿವಾರ ಮಾತನಾಡಿ, ಸರ್ಕಾರವೇ ರೌಡಿಗಳ ಮೂಲಕ ಇಂಥದ್ದೊಂದು ದಂಧೆಗೆ ಇಳಿದಿದೆ. ಇದು ಸಿಎಂ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು. ಚೆಕ್‌ ಪೋಸ್ಟ್‌ಗಳಲ್ಲಿ ಅನಧಿಕೃತವಾಗಿ ವಸೂಲಿ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಗೃಹ ಸಚಿವರು ಹಾಗೂ ಸಾರಿಗೆ ಸಚಿವರೇ ಜವಾಬ್ದಾರರು ಎಂದು ಕುಮಾರಸ್ವಾಮಿ ಆರೋಪಿಸಿದರು.

ವಿಜಯಪುರ ಜಿಲ್ಲೆ ಝಳಕಿ ಸೇರಿ ರಾಜ್ಯದ ಚೆಕ್‌ಪೋಸ್ಟ್‌ ಗಳಲ್ಲಿ ನಡೆಯುತ್ತಿರುವ ದಂಧೆಯ ಬಗ್ಗೆ 15 ದಿನಗಳವರೆಗೂ ಕಾಯುತ್ತೇನೆ.

ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನಮ್ಮ ಪಕ್ಷದಿಂದಲೇ ದಾಳಿ ಮಾಡಿ ವಸೂಲಿಗಾರರನ್ನು ಹಿಡಿಯಲಾಗುವುದು ಎಂದರು.

ಸಿದ್ದರಾಮಯ್ಯ ಬೇರೆಯವರ ಬಗ್ಗೆ “ಡೋಂಗಿ’ ಪದಬಳಸುತ್ತಾರೆ. ಅದು ಅವರಿಗೆ ಬಹುಪ್ರಿಯ ಪದ. ಆದರೆ, ಸಮಾಜವಾದ ಹಿನ್ನೆಲೆಯಿಂದ ಬಂದಿರುವ ಅವರು 50 ಸಾವಿರ ರೂ. ಮೌಲ್ಯದ ಶೂ ಬಳಸುತ್ತಾರೆ.ಅವರದ್ದು ಢೋಂಗಿ ಸಮಾಜವಾದವಲ್ಲವೇ ಎಂದು ಪ್ರಶ್ನಿಸಿದರು.

Advertisement

ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಅನೇಕ ಶಾಸಕರು ಜೆಡಿಎಸ್‌ ಸೇರ್ಪಡೆ ಬಗ್ಗೆ ಸಂಪರ್ಕಿಸಿರುವುದು ನಿಜ. ಆದರೆ, ಸಮಯ ಬಂದಾಗ ಆ ಬಗ್ಗೆ ಬಹಿರಂಗಪಡಿಸುತ್ತೇನೆ. ಮಾಲಕರೆಡ್ಡಿ ಹೇಳಿಕೆ ಗಮನಿಸಿದ್ದೇನೆ. ಮಾಲೀಕಯ್ಯ ಗುತ್ತೇದಾರ್‌ ಅವರು ಸಚಿವ ಪ್ರಿಯಾಂಕ ಖರ್ಗೆ ಆಡಳಿತದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಆನಂದ್‌ ಅಸ್ನೋಟಿಕರ್‌ ಜೆಡಿಎಸ್‌ ಸೇರುವ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಆದರೆ, ಸದ್ಯಕ್ಕೆ ಏನೂ ಹೇಳಲಾರೆ.
–  ಎಚ್‌.ಡಿ.ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ

ಎಚ್‌ಡಿಕೆ ಕ್ರಿಯೇಟಿವ್‌ ಸೆಂಟರ್‌ಗೆ ಚಾಲನೆ
ಬೆಂಗಳೂರು:
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ತಲುಪಲು ಜೆಡಿಎಸ್‌ ಹೊಸ ಪ್ರಯೋಗಗಳಲ್ಲಿ ತೊಡಗಿದೆ.

“ಕರ್ನಾಟಕ ನಿಮ್ಮ ಕಡೆಗೆ ನನ್ನ ನಡಿಗೆ’ ಘೋಷವಾಕ್ಯದಡಿ ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌, ಸೌಂಡ್‌ ಕೌಡ್‌,
ಪಿಂಟರೆಸ್ಟ್‌ ಮೂಲಕ ಟಿವಿ ಚಾನೆಲ್‌ಗ‌ಳ ರೀತಿಯಲ್ಲಿ ದಿನದ 24 ಗಂಟೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳ
ಮೂಲಕ ಜೆಡಿಎಸ್‌ ಕಾರ್ಯಚಟುವಟಿಕೆಗಳು, ಕುಮಾರಸ್ವಾಮಿ ಭಾಷಣಗಳನ್ನು ಅಪಲೋಡ್‌ ಮಾಡುವುದು ಇದರ ಉದ್ದೇಶ. “ನಮ್ಮ ಎಚ್‌ಡಿಕೆ’ ಆ್ಯಪ್‌ ನಂತರ ಇದೀಗ “ನಮ್ಮ ಎಚ್‌ಡಿಕೆ’ ಕ್ರಿಯೇಟಿವ್‌ ಸೆಂಟರ್‌ ಆರಂಭಿಸಿದೆ. ಇದರ ಜತೆಗೆ ಮಾಧ್ಯಮಗಳಿಗೆ ಹೇಳಿಕೆಗಳನ್ನು ಸುದ್ದಿರೂಪದಲ್ಲಿ ಕಳುಹಿಸಲು “ಎಚ್‌ಡಿಕೆ μàಚರ್‌ ಸರ್ವೀಸ್‌’, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಸಂದೇಶ ರವಾನಿಸಲು “ನಮ್ಮ ಎಚ್‌ಡಿಕೆ’ ವಾಟ್ಸ್‌ಆ್ಯಪ್‌ ಕೇಂದ್ರ, ಜನ ಸಾಮಾನ್ಯರು ಮಿಸ್ಡ್ ಕಾಲ್‌ ಕೊಟ್ಟರೆ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿ ರವಾನಿಸಲು “ಎಚ್‌ಡಿಕೆ ಕಾಮನ್‌
ಮ್ಯಾನ್‌ ಕ್ಲಿಕ್‌’ ಕೇಂದ್ರ ಸ್ಥಾಪಿಸಲಾಗಿದೆ. ಶನಿವಾರ ಪಕ್ಷದ ಕಚೇರಿಯಲ್ಲಿ ಎಚ್‌ಡಿಕೆ ಕ್ರಿಯೇಟಿವ್‌ ಸೆಂಟರ್‌ಗೆ ಕುಮಾರಸ್ವಾಮಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next