Advertisement

7 ವರ್ಷ ತಲೆಮರೆಸಿಕೊಂಡ ಆರೋಪಿ ಹೆಬ್ರಿ ಪೊಲೀಸ್‌ ಬಲೆಗೆ

07:54 PM Mar 11, 2023 | Team Udayavani |

ಹೆಬ್ರಿ :ಸರಕಳ್ಳತನದ ಆರೋಪ ಮೇಲೆ ತನಿಖೆಯಾಗಿ ಶಿಕ್ಷೆ ಘೋಷಣೆ ಆದ ಬಳಿಕ 7ವಷ9ಗಳ ಹಿಂದೆ ತಲೆಮರೆಸಿಕೊಂಡಿದ್ದ ಪ್ರಕಾಶ ಯಾನೆ ಪಕೀರಪ್ಪ ಎಂಬವನ್ನು ಹೆಬ್ರಿ ಪೊಲೀಸರು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Advertisement

ಹೆಬ್ರಿ ಬಂಟರ ಭವನದ ಬಳಿ 2010ರಲ್ಲಿ ಸರಕಳ್ಳತನ ಮಾಡಿ 5ವಷ9ಗಳಿಂದ ಕೋಟ…9 ನಲ್ಲಿ ತನಿಖೆ ಎದುರಿಸುತ್ತಿದ್ದ ಬಳಿಕ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ವರ್ಷದ ಶಿಕ್ಷೆಯ ತೀರ್ಪು ನೀಡಿದೆ. ಇದನ್ನು ತಿಳಿದ ಈತ ತಲೆಮರೆಸಿಕೊಂಡಿದ್ದ. ಹೆಬ್ರಿ ಪೋಲಿಸ್‌ ಠಾಣಾ ಪೋಲೀಸ್‌ ಉಪನೀಕ್ಷಕರಾದ ನಂದಕುಮಾರ ಎಂ.ಎಂ ಮತ್ತು ನಿರಂಜನ್‌ ಹೆಗಡೆ ಯವರ ಮಾರ್ಗದರ್ಶನದಲ್ಲಿ ಠಾಣಾ ಕ್ರೈಂ ಸಿಬ್ಬಂದಿ ರಾಜ್‌ ಕುರ್ಮಾ , ವಾರೆಂಟ್‌ ಸಿಬ್ಬಂದಿ ಸುರೇಶ್‌ ಕುಮಾರ, ಭರತ ಅವರು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಅಪರಾಧಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next