Advertisement

ಚಾಕೊಲೇಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

08:28 PM Apr 28, 2022 | Team Udayavani |

ಮುಂಬಯಿ: ಟೆಂಪೋ ಚಾಲಕನೊಬ್ಬ ಚಾಕೊಲೇಟ್‌ ಆಮಿಷ ಒಡ್ಡಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಘಟನೆ ಘಾಟ್ಕೋಪರ್‌ ಪೂರ್ವದ ಪರಿಸರದಲ್ಲಿ  ಸಂಭವಿಸಿದ್ದು, ಮುಂಬಯಿ ಪೊಲೀಸರು ಆರೋಪಿ ಸಚಿನ್‌ ಶಾಮ (35)ನನ್ನು ಬಂಧಿಸಿದ್ದಾರೆ.

Advertisement

ಮಗು ಒಂಟಿಯಾಗಿ ಇರುವುದನ್ನು ಕಂಡ ಆರೋಪಿಯು ಆಕೆಗೆ ಚಾಕೊಲೇಟ್‌ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಅನಂತರ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿ ಅಳುತ್ತಿರುವುದನ್ನು ಕಂಡು ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕೌನ್ಸೆಲಿಂಗ್‌ ಬಳಿಕ ಬಾಲಕಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಪೊಲೀಸರು ಸ್ಥಳದಿಂದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ (ಡಿಸಿಪಿ) ವಲಯ 7 ರ ಉಪ ಕಮಿಷನರ್‌ ಪ್ರಶಾಂತ್‌ ಕದಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next