Advertisement

ಮೊಬೈಲ್‌ಗಾಗಿ ಯುವಕನ ಕೊಂದಿದ್ದ ಆರೋಪಿಗಳು ಅಂದರ್‌

12:57 PM Jul 23, 2022 | Team Udayavani |

ಆನೇಕಲ್‌: ಮೊಬೈಲ್‌ ನೀಡಿಲ್ಲ ಎನ್ನುವ ಕಾರಣಕ್ಕೆ ದುಷ್ಕರ್ಮಿಗಳು ಚಾಕುನಿಂದ ಇರಿದು ಕೊಂದು ಎಸ್ಕೇಪ್‌ ಆಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಇಬ್ಬರು ಬಾಲಾಪರಾಧಿಗಳು ಹಾಗೂ ಓರ್ವಆರೋಪಿಯನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

Advertisement

ಕಾರ್ಖಾನೆಯಿಂದ ಸೆಕೆಂಡ್‌ ಶಿಫ್ಟ್ ಮುಗಿಸಿಕೊಂಡು ಕಂಪನಿಯಿಂದ ಹೊರ ಬಂದಥಾಮಸ್‌(26) ಎಂಬ ಯುವಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಎದೆಗೆ ಚೂರಿ ಇರಿದು ಕೊಲೆ ಮಾಡಲಾಗಿತ್ತು. ಯುವಕನ ಕೊಲೆಯಾದ ಸ್ಥಿತಿ ಗಮನಿಸಿ, ಯಾವುದೋ ಹಳೇ ದ್ವೇಷ ಇರಬಹುದು ಎಂದು ಯೋಚಿಸಿದ್ದ ಪೊಲೀಸರಿಗೆ ಹೊರ ಬಂದ ಮಾಹಿತಿ ಶಾಕ್‌ ಕೊಟ್ಟಿತ್ತು. ಕೇವಲ ಮೊಬೈಲ್‌ಗಾಗಿ ಒಬ್ಬ ಯುವಕನ ಪ್ರಾಣ ತೆಗೆಯಲಾಗಿತ್ತು. ಹಂತಕರು ಯುವಕನ ಎದೆಗೆ ಚುಚ್ಚಿ ಓಡಿ ಹೋದ ಚಿತ್ರಣ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ರಾತ್ರಿ ವೇಳೆ ಮೊಬೈಲ್‌ ಉಪಯೋಗಿಸಿಕೊಂಡು ಹೋಗುವವರ ಭಯ ಹುಟ್ಟಿಸುವಂತಹ ಘಟನೆ ಜಿಗಣಿಯಲ್ಲಿನಡೆದು ಹೋಗಿತ್ತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದರು.

ಮೊಬೈಲ್‌ ನೀಡುವಂತೆ ಧಮ್ಕಿ: ಕೊಲೆಯಾದ ಯುವಕ ಥಾಮಸ್‌ ಕೇರಳದ ಮೂಲದವ. ಜಿಗಣಿಯ ಟಾಟಾ ಅಡ್ವಾನ್ಸ್‌ ಕಂಪನಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಜು. 14ರಂದು ರಾತ್ರಿ 10:30 ಕೆಲಸ ಮುಗಿಸಿ ಮನೆಗೆ ವಾಪಾಸ್‌ ಆಗುವ ವೇಳೆ ಮೊಬೈಲ್‌ನಲ್ಲಿ ಮಾತ ನಾಡುತ್ತಾ ತೆರಳುತ್ತಿದ್ದ, ಅದೇ ಸಮಯಕ್ಕೆ ದ್ವಿಚಕ್ರವಾಹನದಲ್ಲಿ ಬಂದ ಮೂರು ಜನ ಖದೀಮರು, ಮೊಬೈಲ್‌ ನೀಡುವಂತೆ ಧಮ್ಕಿ ಹಾಕಿದ್ದಾರೆ. ಥಾಮಸ್‌ ಮೊಬೈ ಲ್‌ ನೀಡಲು ನಿರಾಕರಿಸಿದ್ದಾಗ ಬಲವಂತ ವಾಗಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಥಾಮಸ್‌ ಜೋರಾಗಿ ಕೂಗಿದ್ದಾನೆ. ಮೊಬೈಲ್‌ ಕೊಡುವು ದಿಲ್ಲವೇ ಎಂದು ಚೂರಿ ತೆಗೆದ ಆರೋಪಿ ಪುಟ್ಟರಾಜು(23) ಯುವಕನ ಎದೆ ಹಾಗೂ ಕತ್ತಿಗೆ ಚೂರಿ ಇರಿದು ಓಡಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.

ಎರಡು ತಂಡ ರಚನೆ: ಎದೆ ಭಾಗದಿಂದ ಹೃದಯದ ನಾಳಕ್ಕೆ ಚಾಕು ತಾಕಿರುವ ಪರಿಣಾಮ ತೀವ್ರ ರಕ್ತಸ್ರಾವ ಆಗಿ ಥಾಮಸ್‌ ಕೊನೆಯು ಸಿರೆಳೆದಿದ್ದಾನೆ. ಕೊಲೆಗಡುಕರಿಗಾಗಿ ಎರಡು ತಂಡ ರಚಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಕೇವಲ ಮೊಬೈಲ್‌ಗಾಗಿ ಜನರ ಜೀವನವನ್ನೇ ತೆಗೆಯುವಂತಹ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರು ಇಂತಹಪ್ರಕರಣಗಳ ಮೇಲೆ ಕಣ್ಣಿಡಲಿದ್ದಾರೆ. ಜಿಗಣಿ ಹಾಗೂಬೊಮ್ಮಸಂದ್ರ ಕೈಗಾರಿಕಾ ಪ್ರದೇಶದವರ ಸಹಕಾರ ಪಡೆದುಇನ್ನಷ್ಟು ಸೆಕ್ಯೂರಿಟಿ ಹೆಚ್ಚಿಸಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೆ. ವಂಶಿಕೃಷ್ಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next