Advertisement

ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ವೈದ್ಯನಿಂದ ಹಣ ಪಡೆದು ನಕಲಿ ಹನಿಟ್ರಾಪ್‌: ಐವರ ಬಂಧನ

12:47 PM Jul 02, 2022 | Team Udayavani |

ಬೆಂಗಳೂರು: ನಗರ ಪ್ರತಿಷ್ಠಿತ ಕಾಲೇಜಿನಲ್ಲಿ ನಿಮ್ಮ ಮಗನಿಗೆ ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ಹೇಳಿ ಕಲಬುರಗಿ ಮೂಲದ ವೈದ್ಯನನ್ನು ನಂಬಿಸಿ ಹಣ ಪಡೆದ ಬಳಿಕ ನಕಲಿ ಹನಿಟ್ರಾಪ್‌ ಮೂಲಕ 1.16 ಕೋಟಿ ರೂ.ಹಣ ವಸೂಲಿಗೆ ಇಳಿದಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಕಲಬುರಗಿ ಆಳಂದ ಮೂಲದ ವೈದ್ಯ ಶಂಕರ್‌ ಬಾಬುರಾವ್‌ ನೀಡಿದ ದೂರಿನ ಮೇರೆಗೆ ಬೆದರಿಸಿ ಹಣ ವಸೂಲಿಗೆ ಮಾಡಿದ್ದ ನಾಗರಾಜ್‌ ಸಿದ್ದಣ್ಣ ಬೋರುಟಿ (36), ಮಲ್ಲಿಕಾರ್ಜುನ್‌ ವಾಲಿ (38), ಮಧು ಶೇಖರ್‌ (28), ಹಮೀದ್‌ (21) ಮತ್ತು ಬಸವರಾಜ್‌ (35)ಎಂಬುವವರು ಸಿಸಿಬಿ ಪೊಲೀಸರು ಬಂಧಿಸಿ, ಆರೋಪಿಗಳಿಂದ 24 ಲಕ್ಷ ರೂ. ನಗದು, 25 ಗ್ರಾಂ ಚಿನ್ನಾಭರಣ ಹಾಗೂ ನಕಲಿ ವಾಕಿಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.

ವೈದ್ಯರು ನೀಡಿದ ದೂರಿನ ಮೇರೆಗೆ ಸಿಸಿಬಿ ವಿಭಾಗದ ಉಪ ಆಯುಕ್ತ ಡಾ.ಶರಣಪ್ಪ ಹಾಗೂ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಧರ್ಮೇಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಹನಿಟ್ರ್ಯಾಪ್‌ ಯತ್ನ, ನಕಲಿ ದಾಳಿ: ವೈದ್ಯರು ಮಗನ ವೈದ್ಯಕೀಯ ಸೀಟು ವಂಚನೆ ಗೊತ್ತಾಗಿ ಹಣ ಮರಳಿ ನೀಡುವಂತೆ ಆರೋಪಿ ನಾಗರಾಜ್‌ಗೆ ಕೇಳಿದ್ದಾರೆ. ನಾಗರಾಜ್‌ ಸಂಚು ರೂಪಿಸಿ ಬೆಂಗಳೂರಿಗೆ ಬನ್ನಿ ಎಂದು ಹೇಳಿದ್ದ. ಮಹಾರಾಷ್ಟ್ರದಲ್ಲಿ ತನಗೆ ಪರಿಚಯ ಇದ್ದ ಮಹಿಳೆಯನ್ನು ಬರಮಾಡಿಕೊಂಡ ನಾಗರಾಜ್‌ ವೈದ್ಯರಿಗೆ ಪರಿಚಯ ಮಾಡಿಸಿ, ವೈದ್ಯ ಶಂಕರ್‌ ಜತೆ ಮೆಜೆಸ್ಟಿಕ್‌ನ ಗಾಂಧಿನಗರದ ಲಾಡ್‌ ನಲ್ಲಿ ರೋಮ್‌ನಲ್ಲಿ ಉಳಿಯುವಂತೆ ಮಾಡಿದ್ದಾನೆ.

ನಂತರ ಮಹಾರಾಷ್ಟ್ರ ಮೂಲದ ಲೈಂಗಿಕ ಕಾರ್ಯಕರ್ತೆಯರನ್ನು ರೂಮ್‌ಗೆ ಕಳುಹಿಸಿ, ಅವರು ಫೋಟೊ ಕ್ಲಿಕ್ಕಿಸಿಕೊಳ್ಳುವಂತೆ ಮಾಡಿ ಹನಿ ಟ್ರ್ಯಾಪ್‌ಗೆ ಯತ್ನ ಮಾಡಿದ್ದ. ಈತನ ಸ್ನೇಹಿತರಾದ ಹಮೀದ್‌ ಮತ್ತು ಬಸವರಾಜ್‌ ಮಧ್ಯರಾತ್ರಿ ಪೊಲೀಸರ ವೇಷದಲ್ಲಿ ವಾಕಿಟಾಕಿ ಹಿಡಿದುಕೊಂಡು ರೇಡ್‌ ಮಾಡಿ ವೈದರಿಗೆ ಬೆದರಿಕೆ ಹಾಕಿದ್ದರು. ಜತೆಗೆ ವೈದ್ಯರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸದಿರಲು 50 ಲಕ್ಷ ರೂ. ನೀಡುವಂತೆ ಶಂಕರ್‌ಗೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಬಂಧಿಸುವುದಾಗಿ ಬೆದರಿಸಿದ್ದರು. ಇದಕ್ಕೆ ಅಂಜಿದ ವೈದ್ಯರು ಊರಿಗೆ ತೆರಳಿ ಹಣ ನೀಡುವುದಾಗಿ ಹೇಳಿದ್ದರು.

Advertisement

ಇದನ್ನೂ ಓದಿ:  ವಿದ್ಯುತ್ ಸಂಪರ್ಕ ಪಡೆಯಲು ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯ ನಿಯಮ ರದ್ದು ಮಾಡಿದ ರಾಜ್ಯಸರ್ಕಾರ

ಕಲಬುರಗಿಗೆ ಬಂದ ಶಂಕರ್‌ 50 ಲಕ್ಷ ರೂ. ಸಾಲ ಪಡೆದು ಆರೋಪಿಗಳ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು. ಈ ವೇಳೆ ಕೆಲ ದಿನಗಳ ಕಾಲ ಸುಮ್ಮನಿದ್ದ ಆರೋಪಿ ನಾಗರಾಜ್‌ ಮತ್ತೆ 20 ಲಕ್ಷ ರೂ. ಹಣ ಕೊಡುವಂತೆ ವೈದ್ಯರ ಬಳಿ ಬೇಡಿಕೆಯಿಟ್ಟಿದ್ದಾನೆ. ಇದರಿಂದ ಕಂಗಲಾದ ವೈದ್ಯರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ರಮಣ್‌ ಗುಪ್ತಾ ತಿಳಿಸಿದ್ದಾರೆ.

ವಂಚನೆ ಹೇಗಾಯ್ತು? :

ಕಲಬುರಗಿಯಲ್ಲಿ ಕ್ಲಿನಿಕ್‌ ಇಟ್ಟುಕೊಂಡಿರುವ ಶಂಕರ್‌ ತಮ್ಮ ಮಗನಿಗೆ ಬೆಂಗಳೂರಲ್ಲಿ ಎಂಬಿಬಿಎಸ್‌ ಸೀಟು ಹುಡುಕುತ್ತಿದ್ದರು. ಹಲವು ಬಾರಿ ರಾಜಧಾನಿಗೆ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ವೇಳೆ 8 ವರ್ಷಗಳಿಂದ ಪರಿಚಿತನಾಗಿದ್ದ ನಾಗರಾಜ ಸಿದ್ದಣ್ಣ ಬೋರುಟಿ ತನಗೆ ಮೆಡಿಕಲ್‌ ಕಾಲೇಜೊಂದರಲ್ಲಿ ಪರಿಚಿರತರಾಗಿದ್ದು, ಸೀಟು ಕೊಡಿಸುವ ಭರವಸೆ ನೀಡಿದ್ದಾರೆ. ಇದನ್ನು ನಂಬಿ ವೈದ್ಯರು ಕಳೆದ 1.75 ಲಕ್ಷ ರೂ.ಹಣ ನೀಡಿದ್ದಾರೆ. ಆತ ಕಾಲೇಜಿಗೆ ಕಟ್ಟಿ ಆಡ್ಮಿಷನ್‌ ಮಾಡಿದ್ದಾನೆ. ನಂತರ 66,00,000 ಹಣ ಪಡೆದು ಕಾಲೇಜಿಗೆ ಶುಲ್ಕ ಕಟ್ಟದೆ ಮೋಸ ಮಾಡುತ್ತಾನೆ. ಶಾಲಾ ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ ವೈದ್ಯರ ಮಗನ್ನು ಕಾಲೇಜು ಆಡಳಿತ ಮಂಡಳಿ ವಾಪಸ್‌ ಕಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next