ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ್ದ ಆರೋಪಿಯನ್ನು ಬಂಧಿಸಿ, ಕಡವೆ ಮಾಂಸ, ಬಂದೂಕು ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಹಬಟೂರು ಕೊಪ್ಪಲಿನ ರಾಮೇಗೌಡನನ್ನು ಬಂಧಿತ ಆರೋಪಿ.
ಉದ್ಯಾನದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಆತನ ಮನೆ ಮೇಲೆ ದಾಳಿ ನಡೆಸಿದ ವೇಳೆ ಪರವಾನಗಿ ಇಲ್ಲದ ಒಂದು ಬಂದೂಕು, ಖಾಲಿ ಕಾಡ ತೂಸುಗಳು, ಬೇಟೆಯಾಡಲು ಬಳಸಿದ್ದ ಪರಿಕರಗಳು ಹಾಗೂ ಮನೆಯ ಹಿಂಭಾಗದ ಬ್ಯಾರನ್‌ನಲ್ಲಿಟ್ಟಿದ್ದ 20 ಕೆ.ಜಿ.ಕಡವೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ವಿದ್ಯುತ್ ಅವಘಡ: ಮುದ್ದೇಬಿಹಾಳ ಮೂಲದ ಲೈನಮನ್ ಸಾವು
ನಾಗರಹೊಳೆ ಮುಖ್ಯಸ್ಥ ಮಹೇಶ್‌ಕುಮಾರ್, ಎಸಿಎಫ್.ಸತೀಶ್ ಮಾರ್ಗದರ್ಶನದಲ್ಲಿ, ಆರ್.ಎಫ್.ಓ.ಹನುಮಂತರಾಜು ನೇತೃತ್ವದಲ್ಲಿ ಡಿ.ಆರ್.ಎಫ್.ಓ.ಗಳಾದ ಗಣರಾಜಪಟಗಾರ್, ಮನೋಹರ್, ಪ್ರಸನ್ನಕುಮಾರ್, ವೀರಭದ್ರಯ್ಯ, ಸಿದ್ದರಾಜು, ಮಧುಪ್ರಸಾದ್, ಯೋಗೇಶ್ವರಿ, ಅರಣ್ಯ ರಕ್ಷಕರಾದ ಶಿವರಾಜು, ಚಿಕ್ಕಮಾದು, ರವಿಲಮಾಣಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಎಸಿಎಫ್ ಸತೀಶ್ ಉದಯವಾಣಿಗೆ ತಿಳಿಸಿದ್ದಾರೆ.