Advertisement
43 ವರ್ಷಗಳ ಕಾರ್ಯತಂದೆ ಪಾಟಾಜೆ ಗೋವಿಂದಯ್ಯ ಅವರು 1930ರ ದಶಕದಲ್ಲೇ ತನ್ನೂರಿನಲ್ಲಿ ಸುರಿ ಯುವ ಮಳೆ ಪ್ರಮಾಣ ಅಂದಾಜಿಸಿ ಬರೆದಿಡುವ ಹವ್ಯಾಸ ಹೊಂದಿದ್ದರು. ಈ ಆಸಕ್ತಿ ಪುತ್ರ PGSN ಪ್ರಸಾದ್ ಅವರಲ್ಲಿ ಮೂಡಿತ್ತು. ರೇಡಿಯೋದಲ್ಲಿನ ಹವಾಮಾನ ಸುದ್ದಿ ಆಸಕ್ತಿಗೆ ಇನ್ನಷ್ಟು ಇಂಬು ನೀಡಿತ್ತು.
1976ರಲ್ಲಿ ತನ್ನ ಮನೆ ಅಂಗಳದಲ್ಲಿ ಮಳೆ ಮಾಪನ ಇರಿಸಿ, ಅದನ್ನು ಆಳೆದು ದಾಖಲಿಸಲು ಆರಂಭಿಸಿದರು. ಪಾಟಾಜೆ ಗೋವಿಂದಯ್ಯ ಸತ್ಯನಾರಾಯಣ ಪ್ರಸಾದ್ (PGSN ಪ್ರಸಾದ್) 43 ವರ್ಷಗಳಲ್ಲಿ ಮಳೆ, ಹವಾಮಾನ ಕುರಿತು ಸೋಜಿಗದ ಸಂಗತಿಗಳನ್ನು ಗಮನಿಸಿ, ದಾಖಲಿಸಿದ್ದಾರೆ.
ಸಂಗ್ರಹ ಹೀಗೆ…
ಮೇಲಿನಿಂದ ಕೆಳಗಿನವರೆಗೂ ಸಮಾನ ಅಳತೆಯ, ಒಳ ತಳಭಾಗ ಸಮತಟ್ಟಾಗಿರುವ ಗಾಜಿನ ಜಾಡಿ ಬಳಸಿ, ಜಾಡಿಯನ್ನು ಕನಿಷ್ಠ 2 ಅಡಿ ಎತ್ತರದ ಪೀಠದ ಮೇಲೆ ಗಾಳಿಗೆ ಬೀಳದಂತೆ ಭದ್ರಪಡಿಸಲಾಗಿದೆ. ಮಳೆ ಮಾಪಕಕ್ಕೆ ಮಳೆ ನೀರು ಅಡೆತಡೆ ಇಲ್ಲದೆ ಬೀಳುವಂತಿರಬೇಕು. ಮನೆ ಮುಂಭಾಗದಲ್ಲಿ ಈ ಮಾಪಕ ಇಡಲಾಗಿದೆ. PGSN ಕಾರ್ಯನಿಮಿತ್ತ ಮನೆಯಲ್ಲಿರದಿದ್ದರೆ, ಅವರ ಪತ್ನಿ ಅಥವಾ ಮಗ ಮಳೆ ಮಾಪನವನ್ನು ದಾಖಲಿಸುತ್ತಾರೆ.
Related Articles
– ಗರಿಷ್ಠ ಮಳೆ – 873 ಮಿ.ಮೀ. (1977 ಜ. 1ರಿಂದ ಜೂ. 6)
– ಕನಿಷ್ಠ ಮಳೆ – 163 ಮಿ.ಮೀ. (1986 ಜನವರಿ 1ರಿಂದ ಜೂನ್ 4)
– ಮುಂಗಾರು ಪೂರ್ವ ಸರಾಸರಿ ಮಳೆ – 337.8 ಮಿ.ಮೀ. (1976-2015)
– ಅತ್ಯಧಿಕ ಮುಂಗಾರು ಮಳೆ – 4796 ಮಿ.ಮೀ. (ಜೂ. 2ರಿಂದ ಸೆ. 8 – 1980)
– ಕನಿಷ್ಠ ಮುಂಗಾರು ಮಳೆ – 1741 ಮಿ.ಮೀ. (1987 ಜೂ. 3ರಿಂದ ಸೆ. 1)
– ಸರಾಸರಿ ಮುಂಗಾರು ಮಳೆ – 3331.3 ಮಿ.ಮೀ. (1976-2015)
– ಅತ್ಯಧಿಕ ಹಿಂಗಾರು ಮಳೆ – 1475 ಮಿ.ಮೀ. (ಸೆ. 5ರಿಂದ ಡಿ. 31 – 1976)
– ಕನಿಷ್ಠ ಹಿಂಗಾರು ಮಳೆ – 373 ಮಿ.ಮೀ. (1982 ಸೆ. 2ರಿಂದ ಡಿ. 31)
– ಸರಾಸರಿ ಹಿಂಗಾರು ಮಳೆ – 819.9 ಮಿ.ಮೀ. (1976-2015)
– ದಿನವೊಂದರ ಗರಿಷ್ಠ ಮಳೆ – 292 ಮಿ.ಮೀ. (1-8-1982)
– 48 ಗಂಟೆಗಳ ಗರಿಷ್ಠ ಮಳೆ – 507 ಮಿ.ಮೀ. (1, 2 ಆಗಸ್ಟ್, 1982)
– 72 ಗಂಟೆಗಳ ಗರಿಷ್ಠ ಮಳೆ – 632 ಮಿ.ಮೀ. (1982 ಜು. 31ರಿಂದ ಆ. 2)
– 1992ರ ಜು. 27ರಿಂದ ಆ. 2ರ ವರೆಗೆ ಸತತ ಒಂದು ವಾರ ಕಾಲ 934 ಮಿ.ಮೀ. ಮಳೆ ಸುರಿದಿರುವುದು ದಾಖಲೆ.
– 1978ರಲ್ಲಿ ಮೇ 9ರಿಂದ ಸೆ. 5ರ ತನಕ ಸತತ 120 ದಿನಗಳಲ್ಲಿ 4908 ಮಿ.ಮೀ. (ಆ ವರ್ಷ ವಾರ್ಷಿಕ 619 ಮಿ.ಮೀ.) ಮಳೆ ಸುರಿದಿತ್ತು.
– 1998ರಲ್ಲಿ ಜೂ. 8ರಿಂದ ಜು. 14ರ ತನಕ ಸತತ 37 ದಿನಗಳಲ್ಲಿ 2150 ಮಿ.ಮೀ. ಮಳೆ ದಾಖಲಾಗಿತ್ತು (ದಿನವೊಂದರ ಗರಿಷ್ಠ ಸರಾಸರಿ – 5 8ಮಿ.ಮೀ.).
Advertisement
ತಾಳ್ಮೆ ಅಗತ್ಯ
ನನ್ನ ಪಾಲಿಗೆ ಇದು ಹವ್ಯಾಸ ಮಾತ್ರ ಅಲ್ಲ. ದಿನಚರಿ ಆಗಿದೆ. ದಾಖಲೆ ಸಂಗ್ರಹಕ್ಕೆ ತಾಳ್ಮೆ ಅತ್ಯಗತ್ಯ. ಮಳೆಮಾಪನ ಅಳವಡಿಕೆ 1,000 ರೂ. ಒಳಗೆ ಖರ್ಚು ತಗಲುತ್ತದೆ. ಸಣ್ಣ ಖರ್ಚು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ ತಾಲೂಕಿನಲ್ಲಿ ನಾಲ್ಕು ಮಂದಿ ಮಳೆ ಮಾಪನ ಅಳವಡಿಸಿದ್ದಾರೆ. ಬೇರೆ ಇದ್ದರೂ ಇರಬಹುದು.
– PGSN ಪ್ರಸಾದ್, ಹವ್ಯಾಸಿ ಮಳೆ ಮಾಪಕ ಆಸಕ್ತಿಕರ ಮಾಹಿತಿ
– ವರ್ಷವೊಂದರಲ್ಲಿ ಮಳೆ ಬಂದ ಅತ್ಯಧಿಕ ದಿನಗಳು – 201 (1978)
- ವರ್ಷವೊಂದರಲ್ಲಿ ಮಳೆ ಬಂದ ಕನಿಷ್ಠ ದಿನಗಳು – 144 (1986)
- ವರ್ಷವೊಂದರಲ್ಲಿ ಮಳೆ ಬರುವ ಸರಾಸರಿ ದಿನಗಳು – 165 (1976-2015)
- ವಾರ್ಷಿಕ ಗರಿಷ್ಠ ಮಳೆ – 6443 ಮಿ.ಮೀ.(1980)
– ವಾರ್ಷಿಕ ಕನಿಷ್ಠ ಮಳೆ – 2732 ಮಿ.ಮೀ. (1987)
– ವಾರ್ಷಿಕ ಸರಾಸರಿ ಮಳೆ – 4490 ಮಿ.ಮೀ. (1976-2015) — ಕಿರಣ್ ಪ್ರಸಾದ್ ಕುಂಡಡ್ಕ