Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3,98,818 ಲಕ್ಷ ಖಾತೆದಾರರ ಪೈಕಿ 2.52 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಜು.19ರ ವರೆಗಿನಅಂಕಿಅಂಶ ಪ್ರಕಾರ 1,24,362 ಮಂದಿ ಖಾತೆದಾರರು ಅರ್ಹರೆಂದು ಪರಿಗಣಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,89,900 ಲಕ್ಷ ಖಾತೆದಾರರು ಅರ್ಜಿಸಲ್ಲಿಸಿದ್ದು, 1,27,613 ಮಂದಿಯನ್ನು ಅರ್ಹರೆಂದು ಗುರುತಿಸಲಾಗಿದೆ. ಕಂದಾಯ ಇಲಾಖೆಯಿಂದ ಮತ್ತೂಂದು ಸುತ್ತಿನ ಪರಿಶೀಲನೆಯಾಗುತ್ತಿದೆ. ಒಂದೇ ಕುಟುಂಬದ ಪತಿ, ಪತ್ನಿ,ಮಕ್ಕಳ ಹೆಸರಲ್ಲಿ ಜಮೀನು ಹೊಂದಿದ್ದು,ಎಲ್ಲರೂ ಅರ್ಜಿ ಸಲ್ಲಿಸಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂಥ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮತ್ತಷ್ಟು ಫಲಾನುಭವಿಗಳು ಇದರಿಂದ ಅವಕಾಶ ವಂಚಿತರಾಗುವ ಸಾಧ್ಯತೆಯೂ ಇದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ರೈತರ ಖಾತೆಗಳಿಗೆ ಮೊದಲ ಕಂತಿನ 2 ಸಾವಿರ ರೂ. ಹಣ ನೇರ ಜಮೆ ಆಗಿದೆ.ಈ ಮುನ್ನ ಕೇವಲ ಸಣ್ಣ ಹಿಡುವಳಿದಾರರಿಗೆ ಮೀಸಲಾಗಿದ್ದ ಈ ಯೋಜನೆಯನ್ನು ಈಗ ತೆರಿಗೆ ಪಾವತಿಸುವವರು ಮತ್ತು ಸರಕಾರಿ, ಅರೆ ಸರಕಾರಿ ನೌಕರಿ ಹೊಂದಿರುವವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರೈತರಿಗೆ ವಿಸ್ತರಿಸಲಾಗಿದೆ. ಹೀಗಾಗಿ ದ.ಕ., ಉಡುಪಿ ಜಿಲ್ಲೆಯ 2,51,975 ಅರ್ಜಿದಾರ ರೈತರು ಯೋಜನೆಯ ಲಾಭ ಪಡೆಯಲಿದ್ದಾರೆ.
Related Articles
ಆರಂಭದಲ್ಲಿ ಅರ್ಜಿ ಸಲ್ಲಿಸಲು ರೈತರು ಹಿಂದೇಟು ಹಾಕಿದ್ದರು. ಬಳಿಕದ ದಿನಗಳಲ್ಲಿ ಕೃಷಿ, ತೋಟಗಾರಿಕೆ, ನಾಡ ಕಚೇರಿ, ಗ್ರಾ.ಪಂ. ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ಮೂಲಕವೂ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳು, ಸಹಕಾರಿ ಸಂಘಗಳವರು ಉಭಯ ಜಿಲ್ಲೆಗಳಲ್ಲಿ ಮನೆ ಭೇಟಿ ನಡೆಸಿ ಯೋಜನೆಯ ಮಾಹಿತಿ ನೀಡಲು, ಅರ್ಜಿ ಸ್ವೀಕರಿಸಲುಮುಂದಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿ ತಾ|ನಲ್ಲಿ ಗರಿಷ್ಠ 29,835 ಮತ್ತು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಗರಿಷ್ಠ 36,946 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ.
Advertisement
ಮೂರು ಲಕ್ಷಕ್ಕೂ ಅಧಿಕ ಖಾತೆದಾರರ ಸಂಖ್ಯೆ ಇದ್ದರೂ ಭೂ ಪರಿವರ್ತನೆ, ಇತರ ವಾಣಿಜ್ಯ ಉದ್ದೇಶಗಳಿಂದ ಒಂದೇ ಕುಟುಂಬದ ಪತಿ, ಪತ್ನಿ ಇಬ್ಬರ ಹೆಸರಲ್ಲಿ ಖಾತೆಗಳಿವೆ. ಅರ್ಹರನ್ನು ಪರಿಗಣಿಸುವ ಅವಧಿಯಲ್ಲಿ ಮತ್ತಷ್ಟು ಅರ್ಜಿ ತಿರಸ್ಕಾರಗೊಳ್ಳುವ ಸಾಧ್ಯತೆ ಇದೆ. ಬಾಕಿ ಉಳಿದಿರುವ ಅರ್ಜಿದಾರರು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹದು.– ಸೀತಾ ಸಿ., ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹೊಂದಲಾದ ಗುರಿ ಶೇ.90 ಪೂರ್ಣವಾಗಿದೆ. ಆಧಾರ್ ಸಮಸ್ಯೆ, ಊರಿನಿಂದ ಹೊರಗುಳಿದವರು ಹೊರತುಪಡಿಸಿ 1.27 ಲಕ್ಷ ಮಂದಿಯನ್ನು ಅರ್ಹರು ಎಂದು ಪರಿಗಣಿಸಲಾಗಿದೆ. ಬಾಕಿ ಉಳಿದಿದ್ದವರು ಈ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸದೆ ಹೋದಲ್ಲಿ ಮೊದಲ ಕಂತು ಜಮೆಗೆ ಸಮಸ್ಯೆಯಾಗಲಿದೆ.
– ಕೆಂಪೇಗೌಡ, ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಖಾತೆಗೆ ಸಂದಾಯ ವಿವರ
ದ.ಕ. ಜಿಲ್ಲೆಮೊದಲ ಕಂತು 61,884 (ರೈತ ಖಾತೆ) ಎರಡನೇ ಕಂತು 5,629 ಉಡುಪಿ ಜಿಲ್ಲೆಮೊದಲ ಕಂತು 32,293 ಎರಡನೇ ಕಂತು 2,214 -ಚೈತ್ರೇಶ್ ಇಳಂತಿಲ