Advertisement

10 ದಿನಗಳಲ್ಲಿ 10 ಅಪಘಾತ, 10 ಸಾವು

05:24 PM May 03, 2023 | Team Udayavani |

ರಾಮನಗರ: ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅಂತರ ತಗ್ಗಿಸುವ ಉದ್ದೇಶ ದಿಂದ ನಿರ್ಮಾಣಗೊಂಡಿರುವ ಬೆಂ-ಮೈ ಎಕ್ಸ್‌ ಪ್ರಸ್‌ ಹೈವೆ ಇದೀಗ ಅಪಘಾತಗಳ ಹಾಟ್‌ಸ್ಪಾಟ್‌ ಆಗಿದೆಯಾ ಇಂತಹುದೊಂದು ಪ್ರಶ್ನೆ, ಇತ್ತೀಚಿಗೆ ನಡೆಯುತ್ತಿರುವ ಅಪಘಾತಗಳಿಂದಾಗಿ ಮೂಡಿದೆ.

Advertisement

ಹೌದು.., ಕಳೆದ 10 ದಿನಗಳಲ್ಲಿ ಬೆಂ-ಮೈ ಹೆದ್ದಾರಿಯಲ್ಲಿ 10ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಅದರಲ್ಲೂ ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್‌ನಲ್ಲಿ ಅಪಘಾತಗಳು ವ್ಯಾಪಕ ವಾ ಗಿದ್ದು, ಬೈಪಾಸ್‌ ರಸ್ತೆಯಲ್ಲಿ ಪ್ರಯಾಣಿಸಲು ವಾಹನ ಸವಾರರು ಅಂಜುವಂತಾಗಿದೆ. ಬೈಪಾಸ್‌ ರಸ್ತೆಯಲ್ಲಿ ನಿರಂತರವಾಗಿ ಅಪಘಾತವಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಗಮನಹರಿಸಬೇಕಿದೆ.

ಬೈಪಾಸ್‌ನಲ್ಲೇ ಅತಿ ಹೆಚ್ಚು ಅಪಘಾತ: ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಪ್ರಾರಂಭವಾದ ಬಳಿಕ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ತೀವ್ರವಾಗಿದೆ. ಇದುವರೆಗೆ ಹೈವೇ ನಲ್ಲಿ ನೂರಾರು ಅಪಘಾತಗಳು ಸಂಭವಿಸಿವೆ. ಆದರೆ, ಅತಿ ಹೆಚ್ಚು ಅಪಘಾತಗಳು ಸಂಭವಿಸಿರುವುದು ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್‌ ರಸ್ತೆಯಲ್ಲೇ ಎಂಬುದು ಗಮನಾರ್ಹ. ಈಗಾಗಿ ಈ ಬೈಪಾಸ್‌ ಅಪಘಾತಗಳ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಗೊಂಡಿದೆ.

ರಾಮನಗರ ಮತ್ತು ಚನ್ನಪಟ್ಟಣ ಎರಡೂ ಪಟ್ಟಣಗಳ ಹೊರವಲಯದಲ್ಲಿ ಹಾಯ್ದು ಹೋಗುವ ಈ ಬೈಪಾಸ್‌ ರಸ್ತೆ ರಾಮನಗರ ತಾಲೂ ಕಿನ ಬಸವನಪುರ ಗೇಟ್‌ನಿಂದ ಪ್ರಾರಂಭವಾಗಿ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಅಂತ್ಯಗೊಳ್ಳುತ್ತದೆ. ಈ ಬೈಪಾಸ್‌ 22.50 ಕಿ.ಮೀ. ನಷ್ಟು ಉದ್ದವಿದ್ದು, ಇಷ್ಟು ದೂರು ಯಾವುದೇ ಊರು ಇಲ್ಲದೆ ನಿರಾತಂಕ ವಾಗಿ ವಾಹನಗಳು ಪ್ರಯಾಣಿಸ ಬಹುದಾದ ಕಾರಣ ಇಲ್ಲಿ ಚಲಿಸುವ ವಾಹನಗಳ ವೇಗವು ಸಹಜವಾಗಿಯೇ ಹೆಚ್ಚಿರುತ್ತದೆ ಈ ಹಿನ್ನೆಲೆಯಲ್ಲಿ ಬೈಪಾಸ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.

ಹೆಚ್ಚಿದ ಸಾವಿನ ಪ್ರಮಾಣ: ಬೈಪಾಸ್‌ ರಸ್ತೆಯಲ್ಲಿ ಸಂಭವಿಸುವ ಅಪಘಾ ತಗಳ ತೀವ್ರತೆ ಹೆಚ್ಚಾಗಿದೆ. ಈ ರಸ್ತೆಯಲ್ಲಿ ನೂರು ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ವಾಹನಗಳು ಸಂಚರಿಸುವುದರಿಂದ ಅಪಘಾತ ಸಂಭವಿಸಿದಾಗ ಸಾವಿನ ಪ್ರಮಾಣ ಸಹ ಹೆಚ್ಚಾಗಿದೆ. ಏ.22 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 5 ಮಂದಿ ಸಾವಿಗೀಡಾಗಿದ್ದು, ಮೇ 1ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ 3 ಮಂದಿ ಸಾವಿಗೀಡಾಗಿದ್ದ ಪ್ರಕರಣಗಳು ಇದಕ್ಕೆ ತಾಜಾ ಉದಾಹರಣೆಗಳು. ಈ ಬೈಪಾಸ್‌ ರಸ್ತೆಯಲ್ಲಿ ಸಂಭವಿಸಿದ ಎರಡು ರಸ್ತೆ ಅವಘಡಗಳಲ್ಲಿ ವಾಹನಗಳು ಡಿವೈಡರ್‌ ಹಾರಿ ಮತ್ತೂಂದು ಬದಿಯ ರಸ್ತೆಯಲ್ಲಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿಹೊಡೆದು ಅಪಘಾತಕ್ಕೆ ಕಾರಣವಾಗಿವೆ. ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್‌ ರಸ್ತೆಯಲ್ಲಿ -ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆದ್ದಾರಿ ಪ್ರಾಧಿಕಾರ ಅಗತ್ಯ ಕ್ರಮ ವಹಿಸಲಿ ಅಪಘಾತ ತಪ್ಪಿಸಿ ಪ್ರಯಾಣಿಕರ ಜೀವ ಉಳಿಸಬೇಕಿದೆ.

Advertisement

ಅಪಘಾತ ನಿಯಂತ್ರಣಕ್ಕೆ ಮಾಡಬೇಕಾದ್ದೇನು..?:

  1. ಬೈಪಾಸ್‌ನಲ್ಲಿ ಸಂಚರಿಸುವ ವಾಹನಗಳು ಅಡ್ಡಾದಿಡ್ಡಿ ಲೈನ್‌ ಕ್ರಾಸ್‌ ಮಾಡದಂತೆ ಕ್ರಮ ವಹಿಸಬೇಕು.
  2. ಅಪಘಾತದ ಸಮಯದಲ್ಲಿ ತುರ್ತಾಗಿ ಪ್ರಾಥಮಿಕ ಚಿಕಿತ್ಸೆ ದೊರೆಯುವಂತೆ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಬೇಕು
  3. ಪ್ರಯಾಣಿಕರಿಗೆ ತಿರುವುಗಳು ಹಾಗೂ ರಸ್ತೆ ಬಗ್ಗೆ ಮಾಹಿತಿ ನೀಡಲು ಫಲಕಗಳನ್ನು ಹಾಕಬೇಕು
  4. ಹೆದ್ದಾರಿಗೆ ಸರ್ವೀಸ್‌ ರಸ್ತೆಯಿಂದ ಯಾರೂ ಪ್ರವೇಶಿಸದಂತೆ ಅಳವಡಿಸಿರುವ ತಂತಿ ಬೇಲಿ ಕಿತ್ತುಹೋಗಿದ್ದು ಇದನ್ನು ದುರಸ್ಥಿ ಗೊಳಿಸಿ ಪ್ರಾಣಿಗಳು ಹಾಗೂ ಜನರು ಹೆದ್ದಾರಿ ಪ್ರವೇಶಿಸದಂತೆ ನಿರ್ಬಂಧಿಸಬೇಕು.
  5. ಹೆದ್ದಾರಿಯಲ್ಲಿ ಅನಗತ್ಯವಾಗಿ ನಿಲುಗಡೆ ಮಾಡುವ ವಾಹನಗಳಿಗೆ ಕಡಿವಾಣ ಹಾಕಬೇಕು. ಇದರಿಂದ ಅಪಘಾತಕ್ಕೆ ಕಾರಣವಾಗಿದೆ.
  6. ಬೈಪಾಸ್‌ ರಸ್ತೆಯಲ್ಲಿ ಅಪಘಾತವಾದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ಆಂಬ್ಯುಲೆನ್ಸ್‌ ವ್ಯವಸ್ಥೆ ಕಲ್ಪಿಸಬೇಕು.
  7. ಪ್ರಯಾಣಿಕರ ಸುರಕ್ಷತೆ ಉದ್ದೇಶದಿಂದ ಹೈವೆ ಪೆಟ್ರೋಲಿಂಗ್‌ ವ್ಯವಸ್ಥೆಯನ್ನು ಸಮರ್ಪಕವಾಗಿ ಆರಂಭಿಸಬೇಕು.

ಹೆದ್ದಾರಿ ಸೇವೆ ಆರಂಭ ಬಳಿಕ 80ಕ್ಕೂ ಹೆಚ್ಚು ಆಕ್ಸಿಡೆಂಟ್‌, 40ಕ್ಕೂ ಅಧಿಕ ಸಾವು: ಕಳೆದ 10 ದಿನಗಳ ಅವಧಿಯಲ್ಲಿ ಈ ಪಾಸ್‌ನಲ್ಲಿ 6ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ರಸ್ತೆ ಸಂಚಾರ ಪ್ರಾರಂಭವಾದಾಗಿನಿಂದ ಇದುವರೆಗೆ ಈ ರಸ್ತೆಯಲ್ಲಿ ಸರಿಸುಮಾರು 80ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸರಣಿ ಅಪಘಾತಗಳು ಈ ರಸ್ತೆಯಲ್ಲಿ ನಿರಂತರವಾಗಿ ಸಂಭವಿಸುತ್ತಿದ್ದು, ಅಪಘಾತಗಳ ನಿಯಂತ್ರಣದ ಬಗ್ಗೆ ಗಮನಹರಿಸಬೇಕಿದೆ.

10ದಿನಗಳಲ್ಲಿ ನಡೆದ ಅವಘಡಗಳು:

ಏ.22: ಚನ್ನಪಟ್ಟಣ ತಾಲೂಕಿನ ಲಂಬಾಣಿತಾಂಡ್ಯ ಬಳಿ ಸಂಭವಿಸಿದ ಅಪಘಾತದಲ್ಲಿ 5 ಮಂದಿ ಸಾವು

ಏ.26: ರಾಮನಗರದ ಜಯಪುರ ಗೇಟ್‌ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ 1 ಸಾವು 9 ಮಂದಿಗೆ ಗಾಯ

ಏ.27: ರಾಮನಗರದ ಬಸವನಪುರ ಗೇಟ್‌ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ 4 ಮಂದಿಗೆ ತೀವ್ರ ಗಾಯ

ಮೇ 1: ರಾಮನಗರ ಜಯಪುರ ಗೇಟ್‌ ಬಳಿ ಕಾರಿಗೆ ಬೈಕ್‌ ಢಿಕ್ಕಿ 3 ಮಂದಿ ಸಾವು ಮೇ 1: ರಾಮನಗರದ ಬಸವನಪುರ ಸಮೀಪ ಬೈಕ್‌ಗೆ ಕಾರು ಢಿಕ್ಕಿ 1 ಸಾವು

– ಸು.ನಾ. ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next