Advertisement

ಮಿಲಿಟರಿ ಕ್ಯಾಂಪಸ್‌ನಲ್ಲಿ ಆಕಸ್ಮಿಕ ಬೆಂಕಿ

11:42 AM Nov 30, 2018 | |

ಮಹದೇವಪುರ: ಬೆಳ್ಳಂದೂರು ಕೆರೆಗೆ ಹೊಂದಿಕೊಂಡಿರುವ ಇಬ್ಬಲೂರು ಕೆರೆಯ ಮಿಲಿಟರಿ ಕ್ಯಾಂಪಸ್‌ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಅವರಿಸಿತ್ತು. ಕಳೆದ ವರ್ಷ ಕಲುಷಿತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಸುದ್ದಿಯಾಗಿತ್ತು.

Advertisement

ಇದೀಗ ಬೆಳ್ಳಂದೂರು ಕೆರೆಗೆ ಹೊಂದಿಕೊಂಡಿರುವ ಇಬ್ಬಲೂರು ಕೆರೆಯ ಮಿಲಿಟರಿ ಅಂಗಳದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ಸುತ್ತಲ ನಾಗರಿಕರು ಕೆಲ ಕಾಲ ಅತಂಕಕ್ಕೆ ಒಳಗಾಗಿದ್ದರು. ಮಿಲಿಟರಿ ಅಂಗಳದ ಫೈರಿಂಗ್‌ ಸ್ಥಳದಲ್ಲಿ ಸೈನಿಕರಿಗೆ ತರಬೇತಿ ನೀಡುತ್ತಿದ್ದ ವೇಳೆ ಟೈರ್‌ಗೆ ಬೆಂಕಿ ತಗುಲಿ ದಟ್ಟ ಹೊಗೆ ಅವರಿಸಿತ್ತು.

ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಎಂದು ಸ್ವಷ್ಟಪಡಿಸಿದ್ದಾರೆ. ನಾನಾ ಕಾರಣಗಳಿಂದ ಈ ಪ್ರದೇಶದಲ್ಲಿ ಪದೇ ಪದೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next