Advertisement

ಮನೆಗೆ ಆಕಸ್ಮಿಕ ಬೆಂಕಿ: ಆಭರಣ-ನಗದು ಆಹುತಿ

10:36 AM Dec 08, 2018 | Team Udayavani |

ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ 6 ತೊಲೆ ಬಂಗಾರ, 25 ತೊಲೆ ಬೆಳ್ಳಿ ಹಾಗೂ ನಗದು ಲಕ್ಷಾಂತರ ರೂ. ಬೆಂಕಿಗೆ ಆಹುತಿ ಆಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಚಂದ್ರಕಾಂತ ಭೀಮಶಾ ಭಜಂತ್ರಿ ಎನ್ನುವರ ಮನೆಯೇ ಬೆಂಕಿಗೆ ಆಹುತಿಯಾಗಿದ್ದು. ಮನೆಯವರೆಲ್ಲ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಮನೆಯೊಂದರ ಗೃಹಪ್ರವೇಶಕ್ಕೆ ಹೋಗಿ ಅಲ್ಲಿಯೇ ತಂಗಿದ್ದರು. ಈ ವೇಳೆ ಘಟನೆ ನಡೆದಿದೆ.

Advertisement

ಆಕಸ್ಮಿಕವಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿದ ಗ್ರಾಮಸ್ಥರು ಬೆಂಕಿ ಆರಿಸುವ ಮೊದಲೇ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ದಿನ ಬಳಕೆ ಆಹಾರ ಧಾನ್ಯ, ಬಟ್ಟೆ ಹಾಗೂ ಮಗಳ ಮದುವೆ ಸಂಗ್ರಹಿಸಿಟ್ಟಿದ್ದ ಕಿವಿಯೋಲೆ, ತಾಳಿ ಹಾಗೂ ಇನ್ನಿತರ ಒಡವೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. 

ಶಾಸಕರ ಭೇಟಿ: ಬೆಂಕಿಗೆ ಮನೆಯೊಳಗಿದ್ದ ಬೆಲೆ ಬಾಳುವ ವಸ್ತುಗಳು ಹಾನಿಯಾಗಿದ್ದು ಹಾಗೂ ಲಕ್ಷಾಂತರ ರೂ.ಗಳು ಸುಟ್ಟ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮತ್ತು ರಟಕಲ್‌ ಪೊಲೀಸರಿಗೆ ವರದಿ ನೀಡುವಂತೆ ತಿಳಿಸಲಾಗಿದೆ. ಶೀಘ್ರವೇ ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ ಎಂದು ಶಾಸಕ ಡಾ| ಉಮೇಶ ಜಾಧವ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿದರು.

ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪಿಎಸ್‌ಐ ಇಂದಿರಾ ಪಾಟೀಲ ಚಂದಾಪುರ, ಮಾರುತಿ ಜಮಾದಾರ, ಅಲಿಮ ನಾಯಕೋಡಿ, ಮಲ್ಲಿಕಾರ್ಜುನ ಚಿಂತಕುಂಟ, ಬಸವರಾಜ ಕೋಲಕುಂದಿ, ದೇವಲಾ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next