Advertisement

ಬೆಂಗಳೂರು : ಟೆಸ್ಟ್‌ ಡ್ರೈವ್‌ ವೇಳೆ ಅವಘಡ, ಓರ್ವ ಬಲಿ, ಮೂವರಿಗೆ ಗಾಯ

09:15 AM Mar 29, 2019 | Vishnu Das |

ಬೆಂಗಳೂರು : ನಗರದ ನಾಯಂಡಹಳ್ಳಿ ಯ ನೈಸ್‌ ರಸ್ತೆ ಟೋಲ್‌ ಬಳಿ ಟೆಸ್ಟ್‌ ಡೈವ್‌ ನಡೆಸುತ್ತಿದ್ದ ವೇಳೆ ಐಷಾರಾಮಿ ಕಾರೊಂದು ಅವಘಡಕ್ಕೀಡಾಗಿದ್ದು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

Advertisement

ಗೌತಮ್‌ ಎನ್ನುವವರು ಟೆಸ್ಟ್‌ ಡ್ರೈವ್‌ಗೆಂದು ಬಂದಿದ್ದು , ಅವರೊಂದಿಗೆ ಅಣ್ಣ, ಅತ್ತಿಗೆ ಮತ್ತು ಮಗು ಬಂದಿದ್ದರು. ಕಾರು ಡ್ರೈವ್‌ ಮಾಡುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದ್ದು, ಗೌತಮ್‌ ಸಹೋದರ ಗಂಭೀರವಾಗಿ ಗಾಯಗೊಂಡಿದ್ದು, ಅತ್ತಿಗೆ ಮತ್ತು ಮಗು ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಕಂಪೆನಿಯ ಸಿಬಂದಿ ಕಾರಿನಿಂದ ಹಾರಿ ಪ್ರಾಣಪಾಯಾದಿಂದ ಪಾರಾಗಿದ್ದಾರೆ.

ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next