Advertisement

ಸಿದ್ದಾಪುರ : ಹೆನ್ನಾಬೈಲು ಬಳಿ ಕಾರು-ರಿಕ್ಷಾ ಡಿಕ್ಕಿ : ಮಹಿಳೆ ಸಾವು

03:45 PM Apr 26, 2021 | Team Udayavani |

ಸಿದ್ದಾಪುರ : ಹೈಕಾಡಿಯಿಂದ ತಾಯಿ ಹಾಗೂ ಮಗಳು ಹೊಸಂಗಡಿಯಲ್ಲಿ ಮೃತ ಪಟ್ಟ ತಮ್ಮ ಸಂಬಂಧಿಕರನ್ನು ನೋಡಲು ಹೋಗುವಾಗ ಸಿದ್ದಾಪುರ ಗ್ರಾಮದ ಹೆನ್ನಾಬೈಲ್ ಬಳಿ ಅಪಘಾತವಾಗಿ ಮಹಿಳೆಯು ಸಾವನ್ನಪ್ಪಿರುವ ಘಟನೆ ಸೋಮವಾರ(ಏಪ್ರಿಲ್ 26) ನಡೆದಿದೆ.

Advertisement

ರಸ್ತೆಯಲ್ಲಿ ಬರುವ ವೇಳೆ ಆಟೋ ರಿಕ್ಷಾ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ವೇಳೆ ರಿಕ್ಷಾದಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನು ಅದೇ ರಿಕ್ಷಾದಲ್ಲಿ ಇದ್ದ ಮತ್ತೋರ್ವ ಮಹಿಳೆ ಮತ್ತು ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದೆ ಕಾರಿನಲ್ಲಿದ್ದ ತಂದೆ ಮತ್ತು ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next