Advertisement
ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಮಂದಿರದಲ್ಲಿ ಜರಗಿದ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ರಾಜಾಪುರ ಸಾರಸ್ವತ ಯುವ ವೃಂದ, ಶ್ರೀ ದುರ್ಗಾ ಮಹಿಳಾ ವೃಂದ, ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ, ಶ್ರೀ ಗುರು ರಾಘವೇಂದ್ರ ಮಹಿಳಾ ಭಜನ ಮಂಡಳಿ, ಶ್ರೀ ವಿಶ್ವಕರ್ಮ ಸಂಘ, ಶ್ರೀ ವೈದ್ಯನಾಥ ಭಜನ ಮಂಡಳಿ ಅರಸೀಕಟ್ಟೆ, ರಿûಾ ಚಾಲಕ-ಮಾಲಕರ ಸಂಘ ಬಂಟಕಲ್ಲು ಮತ್ತು ಬಿ.ಸಿ.ರೋಡ್, ಕಾರು ಚಾಲಕ-ಮಾಲಕರ ಸಂಘ, ವೀರಮಾರುತಿ ಕಲಾ ಸಂಘ ಅರಸೀಕಟ್ಟೆ, ಐಸಿವೈಎಂ ಪಾಂಬೂರು ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಧನಾತ್ಮಕ ಸ್ಪಂದನೆ ವ್ಯಕ್ತವಾಗಿ ಸ್ಥಳೀಯ ನಾಗರಿಕರ ಬಹುದಿನದ ಕನಸು ನನಸಾಗುವತ್ತ ದಿಟ್ಟ ಹೆಜ್ಜೆ ಇಡಲಾಯಿತು.
ಶಿರ್ವ ಗ್ರಾಮದ ಎರಡನೆಯ ಪ್ರಮುಖ ವ್ಯವಹಾರ ಕೇಂದ್ರ ಬಂಟಕಲ್ಲು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಮಲ್ಲಿಗೆ ಕೃಷಿ ಈ ಭಾಗದ ಪ್ರಮುಖ ಕಸುಬಾಗಿದೆ. ಐದು ಕಂದಾಯ ಗ್ರಾಮಗಳಾದ ಶಿರ್ವ, ಬೆಳ್ಳೆ, 92 ಹೇರೂರು (ಮಜೂರು), ಕುರ್ಕಾಲು ಮತ್ತು ಇನ್ನಂಜೆ ಗ್ರಾಮಗಳ ಗಡಿಭಾಗದ ಸಂಗಮ ಕೇಂದ್ರ. ಪೇಟೆಯ ಕೇಂದ್ರ ಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಂಟೇಶ್ವರ, ನಾಗಬ್ರಹ್ಮಸ್ಥಾನ, ಸಮೀಪ ದಲ್ಲಿಯೇ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, 92 ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳ ಗುಡಿಗಳಿವೆ. ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಬಿ. ಮಾಧವ ಕಾಮತ್, ಬಿ. ಪುಂಡಲೀಕ ಮರಾಠೆ, ದಿನೇಶ ದೇವಾಡಿಗ ಹೇರೂರು, ರೋಹಿಣಿ ಜಗದೀಶ್ ನಾಯಕ್, ಜಗದೀಶ ಆಚಾರ್ಯ ಹೇರೂರು, ವಿನ್ಸೆಂಟ್ ಕ್ಯಾಸ್ತಲಿನೊ ಪಲ್ಕೆ, ಅನಂತರಾಮ ವಾಗ್ಲೆ ಸಡಂಬೈಲು, ಗಣೇಶ್ ಶೆಟ್ಟಿ ಹೇರೂರು, ಶೈಲೇಶ್ ಕಲ್ಲುಗುಡ್ಡೆ, ಡೆನ್ನಿಸ್ ಡಿ‡’ಸೋಜಾ ಪಾಂಬೂರು, ರಾಘವೇಂದ್ರ ಕುಲಾಲ್, ದಿನೇಶ್ ಎಸ್.ಕೆ., ಹರೀಶ್ ಹೇರೂರು, ವಸಂತಿ ಅಶೋಕ್ ಆಚಾರ್ಯ ಹೇರೂರು, ಅರುಂಧತಿ ಪ್ರಭು, ಶಿಕ್ಷಕ ಎಸ್.ಎಸ್.ಪ್ರಸಾದ್, ಬಂಟಕಲ್ಲು ರಾಮಕೃಷ್ಣ ಶರ್ಮಾ, ಮುರಳೀಧರ ಆಚಾರ್ಯ, ಶಂಕರ ಪದಕಣ್ಣಾಯ, ಇಗ್ನೇಷಿಯಸ್ ಡಿ‡’ಸೋಜಾ, ಶಂಕರ ಕೊಟ್ಯಾನ್, ವಿಠಲ್ ಕುಲಾಲ್ ಉಪಸ್ಥಿತರಿದ್ದರು.
Related Articles
ಹಲವು ದಶಕಗಳ ಹಿಂದೆ ಪ್ರತೀ ಸೋಮವಾರ ಬಂಟಕಲ್ಲಿನಲ್ಲಿ ವಾರದ ಸಂತೆ ಜರಗುತ್ತಿದ್ದು, ಕ್ರಮೇಣ ನಿಂತುಹೋಗಿದೆ. ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಶಿಕ್ಷಕ ಎಸ್.ಎಸ್. ಪ್ರಸಾದ್ ಅವರ ಅಭಿಪ್ರಾಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು.ಬಂಟಕಲ್ಲಿನ ಸರ್ವಾಂಗೀಣ ಪ್ರಗತಿ, ಸಾಮರಸ್ಯ ಹಾಗೂ ನಾಗರಿಕರ ಮೂಲಭೂತ ಸಮಸ್ಯೆಗಳ ಬಗ್ಗೆ ಸ್ಪಂದನೆ ನೀಡುವಲ್ಲಿ ನಾಗರಿಕ ಸೇವಾ ಸಮಿತಿಯನ್ನು ರಚಿಸಿಆ ಮೂಲಕ ವ್ಯವಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
Advertisement