Advertisement

ರಸ್ತೆ ನಿಯಮ ಪಾಲನೆಯಿಂದ ಅಪಘಾತ ನಿಯಂತ್ರಣ: ಎಸ್‌ಪಿ

09:23 PM Jun 30, 2019 | Team Udayavani |

ಉಡುಪಿ: ಪ್ರತಿಯೊಬ್ಬರೂ ರಸ್ತೆ ನಿಯಮ ಸರಿಯಾಗಿ ಪಾಲನೆ ಮಾಡುವುದರಿಂದ ಅಪಘಾತ ನಿಯಂತ್ರಿ ಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕಿ ನಿಶಾ ಜೇಮ್ಸ್‌ ಹೇಳಿದರು.

Advertisement

ಉಡುಪಿ ಜಿಲ್ಲಾ ಪೊಲೀಸ್‌, ಮಣಿಪಾಲ ಕೆಎಂಸಿಯ ಸೆಂಟರ್‌ ಫಾರ್‌ ಫಾರೆನ್ಸಿಕ್‌ ಕ್ಲಿನಿಕಲ್ ಸೆಂಟರ್‌ ಹಾಗೂ ಅನಸ್ತೇಶಿಯಾ ಮತ್ತು ಆರ್ಥೋಪೆಡಿಕ್ಸ್‌ ವಿಭಾಗದ ಸಹ ಯೋಗದಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಮಣಿಪಾಲ ಕೆಎಂಸಿಯ ಟಿ.ಎಂ.ಎ. ಪೈ ಸಭಾಂಗಣದಲ್ಲಿ ರವಿವಾರ ವಾಹನ ಚಾಲಕರಿಗೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಪ್ರತಿವರ್ಷ ಅಪಘಾತದಲ್ಲಿ 1.5ಲಕ್ಷ ಮಂದಿ ರಸ್ತೆ ದುರಂತದಿಂದ ಮರಣ ಹೊಂದುತ್ತಿದ್ದಾರೆ. ಅಂದರೆ ಪ್ರತಿ ಗಂಟೆಗೆ 400 ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ 130 ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದು, ಅಪಘಾತ ಎಂಬುದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.

ವಾಹನ ವಿರುದ್ಧ ಕ್ರಮ

ಈ ಹಿಂದೆ ವಿಶೇಷ ಕಾರ್ಯಾಚರಣೆ ನಡೆಸಿ ಹೆಲ್ಮೆಟ್ ಮತ್ತು ಸೀಟ್ ಬಿಲ್r ಧರಿಸದವರ ವಿರುದ್ಧ ಕ್ರಮ ಜರಗಿಸಲಾಗಿದೆ. ಅದೇ ರೀತಿ ಈ ವಾರದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಶಾಲಾ ಮಕ್ಕಳನ್ನು ಸಾಗಿಸುವ ಮತ್ತು ಗೂಡ್ಸ್‌ ವಾಹನದಲ್ಲಿ ಜನರನ್ನು ಸಾಗಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆ ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರೆ ಪ್ರಾಣ ಉಳಿಸುವ ಪ್ರಮಾಣ ಅಧಿಕವಿರುತ್ತದೆ. ಸ್ಥಳದಲ್ಲಿರುವವರು ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದರೆ ತುಂಬಾ ಪ್ರಾಣ ಉಳಿಸಲು ಸಾಧ್ಯ ಎಂದರು.

Advertisement

ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಕಾನೂನು ಪ್ರಕಾರ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡುವಂತಿಲ್ಲ. ಆಸ್ಪತ್ರೆಯವರು ಕೂಡ ಯಾವುದೇ ಪ್ರಶ್ನೆ ಕೇಳುವಂತಿಲ್ಲ. ಅದೇ ರೀತಿ ಪೊಲೀಸ್‌ ಇಲಾಖೆಯವರು ಕೂಡ ಕಷ್ಟ ಕೊಡುವಂತಿಲ್ಲ. ಸಹಾಯ ಮಾಡಿದ ವ್ಯಕ್ತಿಯ ಒಪ್ಪಿಗೆ ಇದ್ದರೆ ಮಾತ್ರ ಆ ಪ್ರಕರಣದಲ್ಲಿ ಸಾಕ್ಷಿ ಯಾಗಿ ಪರಿಗಣಿಸಲಾಗುತ್ತದೆ. ಒತ್ತಾಯ ಪೂರ್ವಕವಾಗಿ ಸಾಕ್ಷಿಯನ್ನಾಗಿ ಮಾಡಿದರೆ ಪೊಲೀಸರಿಗೆಯೇ ಶಿಕ್ಷೆ ಯಾಗುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಕೆಎಂಸಿಯ ಡೀನ್‌ ಡಾ| ಪ್ರಜ್ಞಾ ರಾವ್‌ ಉಪಸ್ಥಿತರಿದ್ದರು. ಉಡುಪಿ ಪೊಲೀಸ್‌ ವೃತ್ತ ನಿರೀಕ್ಷಕ ಮಂಜುನಾಥ್‌ ಸ್ವಾಗತಿಸಿದರು.

ಅನೆಸ್ತೇಶಿಯಾ ವಿಭಾಗದ ಪ್ರೊಫೆಸರ್‌ ಡಾ| ಅನಿತಾ ಶೆಣೈ ವಂದಿಸಿದರು. ಫಾರೆನ್ಸಿಕ್‌ ಕ್ಲಿನಿಕಲ್ ಸೆಂಟರ್‌ನ ಅಸೋಸಿಯೇಟ್ ಪ್ರೊಫೆಸರ್‌ ಡಾ| ಶಂಕರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next