Advertisement

ಕಟಪಾಡಿ: ರಾ.ಹೆ 66 ರಲ್ಲಿ ಟ್ಯಾಂಕರ್ -ಕಂಟೈನರ್ ಢಿಕ್ಕಿ: ಚಾಲಕನಿಗೆ ಗಾಯ

12:54 PM Mar 15, 2022 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ  ಉದ್ಯಾವರ ಸೇತುವೆ ಬಳಿ ಟ್ಯಾಂಕರ್ ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ.

Advertisement

ತಡರಾತ್ರಿ 1-30ರ ಸುಮಾರಿಗೆ ಕಂಟೈನರ್ ಲಾರಿಗೆ ಹಿಂಭಾಗದಿಂದ ಟ್ಯಾಂಕರ್ ಲಾರಿಯು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೇತುವೆಯ ಪಕ್ಕದ ಕ್ರಾಶ್ ಗಾರ್ಡ್ ಗೆ ತಾಗಿ ಕಂಟೈನರ್ ಲಾರಿಯು ನಿಂತಿದ್ದು ಇಲ್ಲವಾದಲ್ಲಿ ಹೊಳೆಯತ್ತ ವಾಲಿ ಹೆಚ್ಚಿನ ಅನಾಹುತ ಸಂಭಾವಿಸುವ ಸಾಧ್ಯತೆ ಇತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದೂ ತೆರವು ಕಾರ್ಯ ವಿಳಂಬಗೊಂಡಿದೆ.

Advertisement

ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next