ಕನಕಪುರ: ಅಧ್ಯಕ್ಷರು ಮತ್ತು ಅಧಿಕಾರಿಗಳು ಸದಸ್ಯರ ಗಮನಕ್ಕೆ ತರದೆ ಕೆಲ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಅಚ್ಚಲು ಗ್ರಾಪಂ ಸದಸ್ಯರು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು
ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಮಾತನಾಡಿ,ಯಡಮಾರನಹಳ್ಳಿ ಪೈಪ್‌ಲೈನ್ ಕಾಮಗಾರಿ, ಧ್ವಜಕಂಬ ನಿರ್ಮಾಣಕ್ಕೆ ಸದಸ್ಯರ ಗಮನಕ್ಕೆ ತರದೆ ಹಣಬಿಡುಗಡೆ ಮಾಡಿದ್ದಾರೆ. ಈ ನಿರ್ಧಾರ ಕೈಗೊಳ್ಳುವುದುಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಲೆಕ್ಕ ಪರಿಶೋಧನಾ ಸಭೆ ಮಾಡಿ: ಸಿಬ್ಬಂದಿ ವೇತನಕ್ಕೆ 5 ಲಕ್ಷ ರೂ. ತೋರಿದ್ದಾರೆ. ಯಾವ ಸಿಬ್ಬಂದಿಗೆ ಎಷ್ಟು ವೇತನ ಕೊಟ್ಟಿದ್ದೀರಿ ಲೆಕ್ಕ ಕೋಡಿ. 13ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡಿದ್ದ ಸ್ವತ್ಛತೆ ಮತ್ತು ಇತರೆ ಕಾಮಗಾರಿಗೆ ಬಿಡುಗಡೆಯಾಗಿದ್ದ ಹಣಕ್ಕೂ ಆಡಿಟ್‌ವರದಿಗೂ ಹೊಂದಾಣಿಕೆ ಇರಲಿಲ್ಲ. ಇದರ ಬಗ್ಗೆಕಳೆದ ಬಾರಿ ನಡೆದ ಲೆಕ್ಕ ಪರಿಶೋಧನಾ ಸಭೆಯನ್ನುಅರ್ಧಕ್ಕೆ ಮೋಟಕುಗೊಳಿಸಿ, ಒಂದು ವಾರದಲ್ಲಿ ಸಭೆ ಮಾಡಿ ಮಾಹಿತಿ ಕೊಡುವುದಾಗಿ ಹೇಳಿ, 2 ತಿಂಗಳು ಕಳೆದರೂ ಸಭೆ ಮಾಡಿಲ್ಲ. ಮೊದಲು ಲೆಕ್ಕಪರಿಶೋಧನಾ ಸಭೆ ಮಾಡಿ ಮಾಹಿತಿ ಕೋಡಿ ಎಂದು ಸದಸ್ಯ ಕುಮಾರಸ್ವಾಮಿ ಪಟ್ಟುಹಿಡಿದರು.
ಉದ್ಯೋಗ ಚೀಟಿ ವಿಚಾರದಲ್ಲಿ ವಿಳಂಬ: ಸದಸ್ಯ ಅಂದಾನಿಗೌಡ, ಅನಂತ ಮಾತನಾಡಿ, ಉದ್ಯೋಗಕಾರ್ಡ್ ಮಾಡಿಕೊಡುವ ವಿಚಾರದಲ್ಲಿ ಅಧಿಕಾರಿಗಳುವಿಳಂಬ ಮಾಡುತ್ತಿದ್ದಾರೆ. ಪ್ರತಿ ಫಲಾನುಭವಿಗೆಜೀವಿತಾವಧಿಯಲ್ಲಿ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂ. ಸೌಲಭ್ಯವನ್ನು ಮಾತ್ರ ಬಳಸಿಕೊಳ್ಳಲು ಸರ್ಕಾರ ಮಿತಿಗೊಳಿಸಿದೆ. ಇದರಿಂದಕಾಮಗಾರಿಗಳಿಗೆ ಉದ್ಯೋಗ ಕಾರ್ಡ್‌ಗಳ ಕೊರತೆಎದುರಾಗದಂತೆ, ಪ್ರತಿ ಮನೆಗಳಿಗೂ ಉದ್ಯೋಗಕಾರ್ಡ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿ, ಎಂಟು ತಿಂಗಳು ಕಳೆದರೂ ಅಧಿಕಾರಿಗಳು ಉದ್ಯೋಗ ಕಾರ್ಡ್ ಮಾಡಿಕೊಡದೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿ: ಪಿಡಿಒ ರಾಮಯ್ಯ ಮಾತನಾಡಿ, ಗ್ರಾಪಂನಿಂದ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು. ಎರಡು ವರ್ಷದಿಂದ ವೈಯಕ್ತಿಕ ಕಾಮಗಾರಿಗಳಿಗೆ ಮಾತ್ರ ಆದ್ಯತೆನೀಡಲಾಗಿದೆ. ಸಮುದಾಯ ಕಾಮಗಾರಿಗೆ ಅವಕಾಶನೀಡಿಲ್ಲ. 2008ರಿಂದ ಇಲ್ಲಿಯವರೆಗೆ ನರೇಗಾನಡೆದು ಬಂದ ಹಾದಿ ಸುಲಭವಲ್ಲ. ಇನ್ನು ಮುಂದೆ ಹೊಸ ಅಧ್ಯಾಯ ಆರಂಭವಾಗಲಿದೆ. ಎನ್‌ಎನ್ ಎಂಎಸ್ ಯೋಜನೆ ಜಾರಿಯಾಗಲಿದೆ, ಮೊದಲಿನ ಹಾಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಕಾಮಗಾರಿಗಳನ್ನು ನಿಯಮ ಬದ್ಧವಾಗಿ ಮಾಡಬೇಕು ಎಂದರು.
ಜೂ.1ರಿಂದ ಇ-ಖಾತಾ ಆಂದೋಲನ: ಕೆಲವುಸಿಬ್ಬಂದಿಗಳ ವೇತನ 8ರಿಂದ 10 ತಿಂಗಳುಬಾಕಿಯಿತ್ತು. ಹೀಗಾಗಿ 2ರಿಂದ 3 ತಿಂಗಳ ವೇತನನೀಡಿದ್ದೇವೆ. ಸದಸ್ಯರು ಜಮಾ, ಖರ್ಚು ಲೆಕ್ಕ ಕೇಳುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ. ಆದರೆ, ಬಾಕಿ ತೆರಿಗೆ ವಸೂಲಾತಿಗೆ ಬನ್ನಿ ಎಂದರೆ ಯಾವ ಸದಸ್ಯರು ಬರುವುದಿಲ್ಲ. ಜಮಾ ಖರ್ಚು ಲೆಕ್ಕಕೇಳಿ, ನಾವು ಲೆಕ್ಕ ಕೊಡುತ್ತೇವೆ. ಸದಸ್ಯರು ತೆರಿಗೆವಸೂಲಾತಿಗೂ ಮಂಚೂಣಿಯಲ್ಲಿರಬೇಕು. ಜೂ1ರಿಂದ ಇ-ಖಾತಾ ಆಂದೋಲನ ಆರಂಭವಾಗಲಿದ್ದು, ಎಲ್ಲಾ ವಾರ್ಡ್ ವ್ಯಾಪ್ತಿಯಲ್ಲಿಇ-ಖಾತಾ ಆಂದೋಲನ ನಡೆಯಲಿದೆ. ಈ ವೇಳೆತೆರಿಗೆ ವಸೂಲಿ ಮಾಡಲು ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸಾವಿತ್ರಮ್ಮ ಸೇರಿದಂತೆ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.