Advertisement

ರಾಜಕೀಯಕ್ಕೆ ಸಾಧಕರ ಪ್ರವೇಶ

11:45 AM Sep 22, 2017 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ರಾಜಕೀಯದತ್ತ ಆಕರ್ಶಿತರಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಪ್ರಿಸ್ಟೀನ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ಎಂ.ಪ್ರಸನ್ನ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ರಾಜಕೀಯ ಕ್ಷೇತ್ರದ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ, ಬೇಸರ ಇತ್ತು. ಆದರೆ, ಇಂದು ರಾಷ್ಟ್ರಮಟ್ಟದಲ್ಲಿ ಉಂಟಾಗುತ್ತಿರುವ ರಾಜಕೀಯ ಪರಿವರ್ತನೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳನ್ನೂ ರಾಜಕೀಯದತ್ತ ಆಕರ್ಷಿಸುತ್ತಿದೆ. ಇದಕ್ಕೆ ಡಾ.ಪ್ರಸನ್ನ ಮತ್ತಿತರರ ಸೇರ್ಪಡೆ ಸಾಕ್ಷಿ. ಅದೇ ರೀತಿ ಹಿಂದುಳಿದ ವರ್ಗದ ಹಲವು ಮುಖಂಡರೂ ಬಿಜೆಪಿ ಸೇರುತ್ತಿರುವುದು ಆಶಾದಾಯಕ ಸಂಗತಿ ಎಂದರು.

ಇದೇ ವೇಳೆ ಡಾ.ಕುಮಾರ್‌, ಡಾ.ವಿ.ಬಾಲಚಂದ್ರ, ಡಾ.ರಾಮಕೃಷ್ಣ, ಎಂಜಿನಿಯರ್‌ ಹೇಮಂತ್‌ಕುಮಾರ್‌, ವಿ.ರೋಹಿತ್‌, ವಿಧುಪತಿ, ಮೋಹನ್‌, ವೀರೇಶ್‌ ಮತ್ತಿತರರು ಬಿಜೆಪಿ ಸೇರಿದರು. ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಬಸವರಾಜು, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಮುಖಂಡರಾದ ರಾಜೇಂದ್ರಕುಮಾರ್‌, ಶಿವರಾಮ್‌, ಎಂ.ನಾಗರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next