Advertisement

ಡಿಜಿಲಾಕರ್‌ಗೆ ಕೇಂದ್ರದ ಅಧಿಕೃತ ಮುದ್ರೆ

06:00 AM Aug 10, 2018 | Team Udayavani |

ಹೊಸದಿಲ್ಲಿ: ಇನ್ನು ದೇಶಾದ್ಯಂತ ಎಲ್ಲೇ ಹೋದರೂ, ನೀವು ಚಾಲನಾ ಪರವಾನಗಿ, ವಾಹನದ ದಾಖಲೆಪತ್ರಗಳನ್ನು ಜತೆಗೆ ಇಟ್ಟುಕೊಳ್ಳಬೇಕಿಲ್ಲ. ಸರ್ಕಾರದ ಡಿಜಿಲಾಕರ್‌ನಲ್ಲಿ ಅಪ್‌ಲೋಡ್‌ ಮಾಡಿಟ್ಟುಕೊಂಡರೆ ಸಾಕು.

Advertisement

ಮೋಟಾರ್‌ ವಾಹನ ಕಾಯ್ದೆ 1988 ಹಾಗೂ ಐಟಿ ಕಾಯ್ದೆ 2000ನ ಅಡಿಯಲ್ಲಿ ಡಿಜಿಲಾಕರ್‌ನಲ್ಲಿರುವ ದಾಖಲೆಗಳು ಮೂಲ ದಾಖಲೆ ಗಳಂತೆಯೇ ಮಾನ್ಯ ಎಂದು  ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದಲ್ಲಿ ಫೆಬ್ರವರಿಯಲ್ಲೇ ಸಾರಿಗೆ ಇಲಾಖೆ ವಾಹನಗಳ ದಾಖಲೆಪತ್ರಗಳಿಗೆ ಡಿಜಿಲಾಕರ್‌ ಅನ್ನು ಕಾನೂನುಬದ್ಧಗೊಳಿಸಿತ್ತು. ಇದೀಗ ಕೇಂದ್ರವೂ ಅಧಿಕೃತ ಮುದ್ರೆ ಹಾಕಿದಂತಾಗಿದೆ. ಸಾಕಷ್ಟು ಸಲಹೆಗಳು, ಆರ್‌ಟಿಐ ಅರ್ಜಿಗಳ ಮೂಲಕ ನಾಗರಿಕರು ಡಿಜಿಲಾಕರ್‌ ಕಾನೂನುಬದ್ಧಗೊಳಿಸ ಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next