ಚಿಕ್ಕೋಡಿ: ಸೋಲು-ಗೆಲುವು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನೂ ಸಮಾನಾಗಿ ಸ್ವೀಕರಿಸಬೇಕು ಎಂದು ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಪಿ.ವಿ. ಕಡಗಡಕಾಯಿ ಹೇಳಿದರು.
ಪ್ರಾಚಾರ್ಯ ಡಾ| ಪ್ರಕಾಶ ಹುಬ್ಬಳ್ಳಿ ಮಾತನಾಡಿ, ಆರೋಗ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುವುದು ಸೂಕ್ತ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಿದಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದುತ್ತಾರೆ ಎಂದರು.
ಸಂಸ್ಥೆಯ ಉಪಕಾರ್ಯಾಧ್ಯಕ್ಷ ಪಪ್ಪುಅಣ್ಣಾ ಪಾಟೀಲ ಮಾತನಾಡಿ, ಹಳ್ಳಿಯ ಸೊಗಡನ್ನು ಸೂಚಿಸುವ ಕಬಡ್ಡಿ ಆಟ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಪಠ್ಯೇತರದೊಂದಿಗೆ ಕ್ರೀಡೆಗಳಲ್ಲೂ ಹಿತಾಸಕಿ ತೋರಿಸಬೇಕು ಎಂದರು.
ಸಂಚಾಲಕ ಸಂಜಯ ಮೊಳವಾಡೆ, ಎಸ್.ಜಿ. ಕಲ್ಯಾಣಶೆಟ್ಟಿ, ವಿನಾಯಕ ಢೋಲೆ, ದೈಹಿಕ ಶಿಕ್ಷಣ ನಿರ್ದೇಶಕ ಶಶಿರಾಜ ತೇಲಿ ವೇದಿಕೆಯಲ್ಲಿದ್ದರು. ದೈಹಿಕ ನಿರ್ದೇಶಕಿ ಸಂಗೀತಾ ಕರಾಳೆ, ಪ್ರೊ| ಸಂಪತ್ ಬಿಜಲೆ, ಪ್ರೊ| ಸಂದೇಶ ಮನೋಚಾರ್ಯ, ಪ್ರೊ| ಅನುಪ ಪಾಟೀಲ, ಪ್ರೊ| ಮಲ್ಲಿಕಾರ್ಜುನ ಸರ್ಸಾಂಬಾ, ಪ್ರೊ| ಸಚಿನ ಮೆಹತಾ ಇತರರು ಇದ್ದರು. ಚಿನ್ನಮ್ಮ ಹಪ್ಪಳ್ಳಿ ಸ್ವಾಗತಿಸಿದರು. ಕಾವೇರಿ ಜಾಲಿಸತ್ತಿಗೆ ಮತ್ತು ಸ್ನೇಹಲ್ ಭೋಲೆ ನಿರೂಪಿಸಿದರು.
Advertisement
ನಿಪ್ಪಾಣಿ ವಿ.ಎಸ್.ಎಂ. ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ರೆಸ್ಟ್ ಆಫ್ ಬೆಂಗಳೂರು ವಿ.ಟಿ.ಯು. ಮಹಿಳೆಯರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿ, ಮಹಿಳಾ ಸಬಲೀಕರಣದಲ್ಲಿ ಮಹಿಳಾ ಕಬಡ್ಡಿ ಆಟವೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
Related Articles
ಆಳ್ವಾಸ್ ಐ.ಟಿ. ತಂಡಕ್ಕೆ ಜಯ
ಸ್ಪರ್ಧೆಯಲ್ಲಿ ಸ್ಥಳೀಯ ವಿ.ಎಸ್.ಎಂ.ಎಸ್.ಆರ್.ಕೆ.ಐ.ಟಿ., ಮೈಸೂರಿನ ಜಿ.ಎಸ್.ಎಸ್.ಎಸ್.ಐ.ಇ.ಟಿ.ಡಬ್ಲ್ತ್ರ್ಯೂ., ಸುಳ್ಳೆಯ ಕೆ.ವಿ.ಜಿ.ಸಿ.ಇ., ಉಜಿರೆಯ ಎಸ್.ಡಿ.ಎಂ.ಸಿ., ಮೂಡಬಿದಿರೆಯ ವೈ.ಐ.ಟಿ. ಮತ್ತು ಆಳ್ವಾಸ್ ಐ.ಟಿ. ಕಾಲೇಜುಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಆಳ್ವಾಸ್ ಐ.ಟಿ. ತಂಡವು ವೈ.ಐ.ಟಿ. ತಂಡಕ್ಕೆ 38-25 ಅಂಕಗಳಿಂದ ಸೋಲಿಸಿ ರೆಸ್ಟ್ ಆಫ್ ಬೆಂಗಳೂರು ವಿ.ಟಿ.ಯು. ಮಹಿಳೆಯರ ಕಬಡ್ಡಿ ಟೂರ್ನಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಬಿ.ಸಿ. ಹರ್ಲಾಪುರ, ಬಿ.ಜಿ. ಬಾಣೆ, ಎಸ್.ಎಲ್. ಪ್ರಭಾತ, ಶರಣು ಹತ್ತಿ, ಅಭಿಷೇಕ ಚುನಮುರೆ, ಶಿವಾನಂದ ತೇಲಿ ನಿರ್ಣಾಯಕತಾಗಿ ಕಾರ್ಯನಿರ್ವಹಿಸಿದರು.
Advertisement