Advertisement
ತಾಲೂಕಿನ ಶ್ರವಣಬೆಳಗೊಳದ ಬಸವನಹಳ್ಳಿ ಗ್ರಾಮದಲ್ಲಿ ಕಾಮಗಾರಿ ತಡವಾಗಲು ರೈಲು ಹಳಿಯನ್ನು ದಾಟಬೇಕಿದೆ ಈ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಲಾಗಿದ್ದು ಕಾಮಗಾರಿ ಮುಂದುವರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುತುವರ್ಜಿ ತೋರಬೇಕು. ರೈತರು ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಏತ ನೀರಾವರಿ ಯೋಜನೆ ಪೂರ್ಣವಾದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
Related Articles
Advertisement
ನೀರಿನ ವಿಷಯದಲ್ಲಿ ರಾಜಕೀಯ ಮಾಡೋಲ್ಲ: ರೈತರಿಗೆ ನೀರು ನೀಡುವ ವಿಷಯಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ . ಕೃಷಿಕರಿಗೆ ನೀರು ಹಾಗೂ ಸಕಾಲಕ್ಕೆ ವಿದ್ಯುತ್ ನೀಡಿದರೆ ಅವರು ದೇಶಕ್ಕೆ ಅನ್ನ ನೀಡುತ್ತಾರೆ. ಅನ್ನದಾತರಿಗೆ ಸೌಲಭ್ಯ ನೀಡಲು ಯಾವುದೇ ಪಕ್ಷ ಮುಂದೆ ಬಂದರೂ ಅದಕ್ಕೆ ಸಹಮತವಿದೆ. ಕ್ಷೇತ್ರದ ಶಾಸಕರು, ಜಿಲ್ಲಾ ಮಂತ್ರಿಗಳೊಂದಿಗೆ ನೀರಿನ ವಿಷಯವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ. ನಮ್ಮ ಪ್ರತಿಷ್ಠೆ ಬದಿಗಿಟ್ಟು ರೈತರು ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಹಿರೀಸಾವೆ ಜುಟ್ಟನಹಳ್ಳಿ ಏತನೀರಾವರಿ ಯೋಜನೆ 56 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದ್ದು, ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ. ರೈಲ್ವೇ ಮೇಲ್ಸೇತುವೆಯ ಮೇಲೆ ಪೈಪ್ ಅಳವಡಿಕೆ¿ ಕಾಮಗಾರಿ ಕೈಗೊಳ್ಳಲು 90 ಲಕ್ಷ ರೂ.ಗಳನ್ನು ಹಣವನ್ನು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಸಂದಾಯ ಮಾಡಿದೆ. ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಅನುಮತಿ ನೀಡಿದರೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಮಂದಗತಿ ಕಾಮಗಾರಿ-ಆಕ್ರೋಶ: ಏತನೀರಾವರಿ ಯೋಜನೆ ಕಾಮಗಾರಿ ಹಾಗೂ ಬಸವನಹಳ್ಳಿ ಬಳಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಏತನೀರಾವರಿ ಯೋಜನೆ ತಡವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಆರು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಕೆಲ ತಿಂಗಳು ಕಾಮಗಾರಿ ನಿಲ್ಲಿಸುತ್ತಾರೆ.
ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಕಾಮಗಾರಿ ಪ್ರಾರಂಭಿಸುತ್ತಾರೆ ಒಂದು ವರ್ಷವಾದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೇ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರೈತರಾದ ಪಿ.ಎ.ನಾಗರಾಜು, ಬೊಮ್ಮೇನಹಳ್ಳಿ ನಿಂಗೇಗೌಡ, ನಾರಾಯಣಗೌಡ ಆರೋಪಿಸಿದರು. ಅಲ್ಲದೇ ರೈಲ್ವೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಸ್ಥಳಕ್ಕೆ ಬರಬೇಕು ಎಂದು ಮನವಿ ಮಾಡಿದರು.