Advertisement
ಲೈಂಗಿಕ ಕಾರ್ಯಕರ್ತೆಯರು, ಲಾರಿ ಚಾಲಕರು ನೂರಾರು ಸಂಖ್ಯೆಯಲ್ಲಿರುವ ಚಿತ್ತಾಪುರ ತಾಲೂಕಿನ ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ 70 ಜನ, ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ 200 ಜನ ಸೇರಿದಂತೆ ಯಾದಗಿರಿ, ಕಲಬುರಗಿ, ಜೇವರ್ಗಿ, ಬೀದರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 900 ಮಂದಿ ಎಚ್‌ಐವಿ ಸೋಂಕಿತರು ಸ್ಥಳೀಯ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಪ್ರತಿ ತಿಂಗಳು ಗುಪ್ತವಾಗಿ ಆಸ್ಪತ್ರೆಗೆ ಬಂದು ಎಚ್‌ಐವಿ ವೈರಸ್ ಪ್ರಮಾಣ, ದೇಹದ ರೋಗನಿರೋಧಕತೆ, ತೂಕ, ಟಿಬಿ ಸೇರಿದಂತೆ ಇತರೆ ಪರೀಕ್ಷೆ ಮಾಡಿಸಿಕೊಂಡು ಮಾತ್ರೆಗಳನ್ನು ಸ್ವೀಕರಿಸುತ್ತಾರೆ.
Related Articles
ಮಾತ್ರೆಗಳನ್ನು ಪಡೆಯುತ್ತಿದ್ದಾರೆಂಬುದು ಆಸ್ಪತ್ರೆ ಸಿಬ್ಬಂದಿಯಿಂದ ತಿಳಿದು ಬಂದಿದೆ. ಸರ್ಕಾರದಿಂದ ಉಚಿತವಾಗಿ ಬರುವ ಮಾತ್ರೆಗಳನ್ನು ವಿತರಿಸುವ ಮೂಲಕ ಸೋಂಕಿತರ ಬದುಕಿನ ಜೀವಾಳವಾಗಿದ್ದ ಉತ್ತಮ ಸೇವೆಯೊಂದನ್ನು ಎಸಿಸಿ ಕಂಪನಿ ಸ್ಥಗಿತಗೊಳಿಸುತ್ತಿರುವುದು ರೋಗಿಗಳ ಆತಂಕಕ್ಕೆ ಕಾರಣವಾಗಿದೆ.
Advertisement
ಎಸಿಸಿ ಕಂಪನಿ ಆಧೀನದಲ್ಲಿ ನಡೆಯುತ್ತಿರುವ ಎಆರ್‌ಟಿ ಸೆಂಟರ್‌ನ್ನು ಸೆ.31ರಂದು ಮುಚ್ಚುವುದಾಗಿ ಎಸಿಸಿ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಬೇರೊಂದು ಸ್ಥಳದಲ್ಲಿ ಕೆಲಸ ನೋಡಿಕೊಳ್ಳುವಂತೆ ನಮಗೆ ಮತ್ತು ಸಿಬ್ಬಂದಿಗೆ ಸೂಚಿಸಿದ್ದಾರೆ. ನಮ್ಮ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ನೂರಾರು ಜನ ಎಚ್‌ಐವಿ ಸೋಂಕಿತರನ್ನು ಜಿಲ್ಲೆಯ ವಿವಿಧೆಡೆ ಇರುವ ಎಆರ್‌ಟಿ ಕೇಂದ್ರಗಳಿಗೆ ವರ್ಗಾಯಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆದೇಶ ಬಂದಿದೆ. ಡಿ.1ರಿಂದ ಆಸ್ಪತ್ರೆ ಸೇವೆ ಸ್ಥಗಿತಗೊಳಿಸಲಿದ್ದು, ಸ್ಥಳೀಯವಾಗಿ ಚಿಕಿತ್ಸೆ ಲಭ್ಯ ಇರಲ್ಲ.ಡಾ| ಸಂಜಯ ಅಳ್ಳೊಳ್ಳಿ,
ವೈದ್ಯಾಧಿಕಾರಿ, ಎಸಿಸಿ ಎಆರ್‌ಟಿ ಕೇಂದ್ರ ಸೆ.31ರಿಂದ ಎಆರ್‌ಟಿ ಕೇಂದ್ರ ಮುಚ್ಚುತ್ತಿದ್ದೇವೆ. ರೋಗಿಗಳನ್ನು ವಿಂಗಡಿಸಿ ಜಿಲ್ಲಾ ಕೇಂದ್ರಕ್ಕೆ ಮತ್ತು ಶಹಾಬಾದ, ಚಿತ್ತಾಪುರ, ಜೇವರ್ಗಿ ಎಆರ್‌ಟಿ ಕೇಂದ್ರಗಳಿಗೆ ನಿಯೋಜಿಸುತ್ತಿದ್ದೇವೆ. 14 ವರ್ಷಗಳ ಕಾಲ ಎಆರ್‌ಟಿ ಕೇಂದ್ರದಿಂದ ಆರೋಗ್ಯ ಸೇವೆ ನೀಡಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ 20ಲಕ್ಷ ರೂ. ಖರ್ಚು ಮಾಡಿದ್ದೇವೆ. ಸದ್ಯ ವಾಡಿ ವಲಯದಲ್ಲಿ ರೋಗಿಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ ಈ ಸೌಲಭ್ಯ ಹಿಂಪಡೆದು ಪರ್ಯಾಯವಾಗಿ ಸಾರ್ವಜನಿಕ ಆರೋಗ್ಯ ಕೇಂದ್ರ ಅಥವಾ ಈ ಭಾಗದ ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ತೆರೆಯಲು ಚಿಂತನೆ ನಡೆದಿದೆ.
ಪೆದ್ದಣ್ಣ ಬೀದಳ, ಮುಖ್ಯ ವ್ಯವಸ್ಥಾಪಕ,
ಎಸಿಸಿ ಸಿಎಸ್‌ಆರ್ ವಿಭಾಗ ಸುಮಾರು 14 ವರ್ಷಗಳ ಕಾಲ ಎಚ್‌ಐವಿ ಸೋಂಕಿತರ ಆರೋಗ್ಯ ಸೇವೆ ಮಾಡಿರುವ ಎಸಿಸಿ ಕಂಪನಿ ಈಗ ಶಾಶ್ವತವಾಗಿ ಆಸ್ಪತ್ರೆ ಮುಚ್ಚಲು ಕೈಗೊಂಡಿರುವ ತೀರ್ಮಾನ ಸರಿಯಾದುದ್ದಲ್ಲ. ಸ್ಥಳೀಯವಾಗಿರುವ ಈ ಆಸ್ಪತ್ರೆಯನ್ನೇ ನೆಚ್ಚಿಕೊಂಡು ಉಸಿರಾಡುತ್ತಿರುವ ನೂರಾರು ಜನ ಎಚ್‌ಐವಿ ಸೋಂಕಿತರು ಇನ್ಮುಂದೆ ಮಾತ್ರೆ ಪಡೆಯಲು-ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗಬೇಕಾದ ದುಸ್ಥಿತಿ ಎದುರಾಗಲಿದೆ. ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳನ್ನು ಸರ್ಕಾರ ಉಚಿತವಾಗಿ ವಿತರಿಸುವಾಗ ಇದರ ವಿತರಿಸಲು ಕಂಪನಿ ಹಿಂದೇಟು ಹಾಕುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಎಆರ್‌ಟಿ ಕೇಂದ್ರ ಮುಚ್ಚಬಾರದು. ಚುನಾಯಿತ ಜನಪ್ರತಿನಿ ಧಿಗಳು ಮಧ್ಯ ಪ್ರವೇಶಿಸಿ ಆಸ್ಪತ್ರೆ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
ಶ್ರವಣಕುಮಾರ ಮೊಸಲಗಿ, ಜಿಲ್ಲಾ
ಸಂಘಟನಾ ಸಂಚಾಲಕ, ಡಿಎಸ್‌ಎಸ್ ಮಡಿವಾಳಪ್ಪ ಹೇರೂರ