Advertisement

ಲೋಕಾಯುಕ್ತಕ್ಕೆ ಎಸಿಬಿ ಪೂರಕ: ನ್ಯಾ.ಪಿ.ವಿಶ್ವನಾಥ ಶೆಟ್ಟಿ

10:58 PM Nov 23, 2019 | Lakshmi GovindaRaj |

ಮಂಗಳೂರು: ಭ್ರಷ್ಟಾಚಾರ ನಿಯಂತ್ರಣ ಹಾಗೂ ದುರಾಡಳಿತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಎಸಿಬಿ ವ್ಯವಸ್ಥೆ ಅಗತ್ಯ ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸಿಬಿ ವಿಚಾರ ನ್ಯಾಯಾಲಯದಲ್ಲಿದ್ದು, ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಶೀಘ್ರ ನ್ಯಾಯಾಲಯದ ತೀರ್ಪು ಬರಲಿದೆ ಎಂದರು.

Advertisement

ಲೋಕಾಯುಕ್ತನಾಗಿ ನನ್ನ 2 ವರ್ಷ 8 ತಿಂಗಳ ಅನುಭವದಿಂದ ಹೇಳುವುದಾದರೆ, ಎಸಿಬಿ ಲೋಕಾಯುಕ್ತಕ್ಕೆ ಪೂರಕವಾಗಿದೆ. ಅದರರ್ಥ ಎಸಿಬಿ ಇಲ್ಲದಿದ್ದರೆ ಲೋಕಾಯುಕ್ತ ದುರ್ಬಲ ಎಂದಲ್ಲ. ಎಸಿಬಿ ಇದ್ದರೆ ಭ್ರಷ್ಟಚಾರದ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ಜತೆಗೆ ಸಮಾಜದ ದೃಷ್ಟಿಯಿಂದಲೂ ಲೋಕಾಯುಕ್ತದಲ್ಲಿ ಎಸಿಬಿ ಇರಬೇಕು ಎಂಬುದು ನನ್ನ ಅನಿಸಿಕೆ ಎಂದರು.

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಪರಿಹಾರ ದೊರಕಿಸಿಕೊಡುವುದು ಲೋಕಾಯುಕ್ತದ ಮೊದಲ ಆದ್ಯತೆ. ಇದರಲ್ಲಿ ಅಧಿಕಾರಿಗಳು ವಿಫಲವಾದರೆ, ಅದು ದುರಾಡಳಿತವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜನರು ಕೂಡ ತಮ್ಮ ಕೆಲಸ ಕಾರ್ಯಗಳಿಗೆ ಅಧಿಕಾರಿಗಳಿಗೆ ಆಮಿಷ ಒಡ್ಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next